Featured StoryState News

ವಿಜಯಪುರದಲ್ಲೂ ಮಂದಿರ ನಾಶ ಮಾಡಿ ಮಸೀದಿ ನಿರ್ಮಾಣ: ಯತ್ನಾಳ

ವಿಜಯಪುರ: ಜಿಲ್ಲೆಯಲ್ಲಿ ಅನೇಕ ದೇವಾಲಯಗಳನ್ನು ನಾಶ ಮಾಡಿ ಮಸೀದಿಗಳನ್ನು ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಪುರಾತತ್ವ ಇಲಾಖೆ ಗಮನ ಹರಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ಹಲವಾರು ದೇವಸ್ಥಾನಗಳನ್ನು ಧ್ವಂಸ ಮಾಡಿ ಮಸೀದಿಗಳನ್ನು ನಿರ್ಮಾಣ ಮಾಡಲಾಗಿದೆ. ಈ ಕುರಿತಂತೆ ಈಗಾಗಲೇ ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗಿದೆ, ಇಲಾಖೆ ಗಮನ ಹರಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ, ಕುತುಬ್ ಮಿನಾರ್ ಸರ್ವೆ ಹಾಗೂ ಉತ್ಖನನ ಮಾಡಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಹಿಂದೂ ದೇವಸ್ಥಾನಗಳನ್ನು ನಾಶಪಡಿಸಿ ಮಸೀದಿ ನಿರ್ಮಿಸಿದ್ದಾರೆ. ಹಿಂದೂಗಳ ವಿರುದ್ಧ ಗೆದ್ದಿದ್ದೇವೆ ಎಂಬ ಸಂಕೇತ ನೀಡಲು ಮತಾಂಧರು ಹೀಗೆ ಮಾಡಿದ್ದಾರೆ. ಅಯೋಧ್ಯ ರಾಮ ಮಂದಿರ, ಕಾಶಿ ವಿಶ್ವನಾಥ ದೇವಸ್ಥಾನ, ಮುತುರಾಜ ಕೃಷ್ಣ ದೇವಸ್ಥಾನ ಮುಕ್ತಮಾಡುವ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ ಎಂದರು.
ಗಾಂಧಿ ಕುಟುಂಬಕ್ಕೆ ಸಂತರ ಶಾಪ ಇರುವುದು ನಿಜ, ಇಂದಿರಾ ಗಾಂಧಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಮಾಡುವ ಆಶ್ವಾಸನೆ ನೀಡಿದ್ದರು. ಅದು ಗೋಹತ್ಯೆ ನಿಷೇಧ ಮಾಡದೆ ಇದ್ದಾಗ ಮುನಿಗಳು ಹೋರಾಟ ಮಾಡಿದರು, ಆಗ ಇಂದಿರಾ ಗಾಂಧಿ ಅವರ ಮೇಲೆ ಗುಂಡು ಹಾರಿಸಿದ್ರು. ಆಗ ಸಂತರು ಶಾಪ ನೀಡಿದ್ದಾರೆ.

ನಮ್ಮನ್ನ ಹೇಗೆ ರಸ್ತೆಯ ಮೇಲೆ ಕೊಂದಿದ್ದಿರೋ ಹಾಗೇ ನಿಮ್ಮ ಕುಟುಂಬದವರಿಗು ಆಗಲಿ ಎಂದು ಶಾಪವಿದೆ. ಅದಕ್ಕೆ ರಾಜೀವ್ ಗಾಂಧಿ, ಇಂದಿರಾ ಗಾಂಧಿಗೂ ಶಾಪ ಇದೆ. ಇನ್ನು ರಾಹುಲ್ ಗಾಂಧಿಗು ಶಾಪವಿದೆ. ಅದಕ್ಕಾಗಿ ರಾಹುಲ್ ಗಾಂಧಿ ಪರಿಸ್ಥಿತಿ ಹೀಗಾಗಿದೆ. ಶಾಪದಿಂದಲೇ ರಾಹುಲ್ ಗಾಂಧಿಗೆ ಮದುವೆ ಆಗಿಲ್ಲ. ಶಾಪದಿಂದಲೇ ಅದು ಎಲ್ಲಿ ಇರೋತ್ತೋ, ಹೇಗಿರುತ್ತೋ, ಎಲ್ಲಿ ದೇಶ ಬಿಟ್ಟು ಹೋಗುತ್ತೊ ಗೊತ್ತಿಲ್ಲ. ಶಾಪ ಕ್ರಮೇಣವಾಗಿ ಕುಟುಂಬವನ್ನ ನಾಶ ಮಾಡುತ್ತಾ ಹೋಗುತ್ತದೆ. ಗಾಂಧಿ ಕುಟುಂಬದ ನಾಶಕ್ಕು ಶಾಪವಿದೆ ಎಂದು ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ಮಾಡಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button