Uttara Kannada

ಅಂಗನವಾಡಿ ನೌಕರರಿಂರ ಕೇಂದ್ರ ಸರ್ಕಾರದ ವಿರುದ್ಧ ಬೇಹತ್ ಪ್ರತಿಭಟನೆ

ಕಾರವಾರ : ಕೇಂದ್ರ ಸರ್ಕಾರದ ಎಂಡಿಎಂ ಯೋಜನೆಯ ಅನುದಾನ‌ಹೆಚ್ಚಿಸಲು ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಕನಿಷ್ಠ ಕೂಲಿಗೆ ಆಗ್ರಹಿಸಿ ಕಾರವಾರದಲ್ಲಿ ಅಂಗನವಾಡಿ
ನೌಕರರಿಂದ ಪ್ರತಿಭಟನಾ ಮೆರವಣಿಗೆ ಮಂಗಳವಾರ ನಡೆಯಿತು.

ನಗರದ ಮುಖ್ಯ ರಸ್ತೆ ಗಳಲ್ಲಿ ಅಂಗನವಾಡಿ ಹಾಗೂ ಅಕ್ಷರ ದಾಸೋಹ ನೌಕರರು ಪ್ರತಿಭಟನಾ ಮೆರವಣಿಗೆ ಮಾಡಿ ಕೇಂದ್ರದ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ನಂತರ ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡು, ತಮ್ಮ ಸಮಸ್ಯೆಗಳನ್ನು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿದರು.
ಸಂಸದರ ಕಚೇರಿ ಕಳೆದ ಹಲವು ತಿಂಗಳಿಂದ ಮುಚ್ಚಿದೆ ಎಂಬ ಮಾಹಿತಿಯನ್ನು ಜಿಲ್ಲಾಡಳಿತ ದಿಂದ ಮಾಹಿತಿ ಪಡೆದ ಸಿಐಇಯು ಸಂಸದರ ಕಚೇರಿ ಮುತ್ತಿಗೆ ಕಾರ್ಯಕ್ರಮವನ್ನು ಕೈ ಬಿಟ್ಟಿತು‌ .

ಅಂಗನವಾಡಿ ನೌಕರರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗಂಗಾ ನಾಯ್ಕ ಸಮಾವೇಶ ಗೊಂಡ ಅಂಗನವಾಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ದೇಶದ ಅಭಿವೃದ್ಧಿ ಸಂಕೇತವಾದ ಮಹಿಳೆ ಮತ್ತು ಮಕ್ಕಳಿಗೆ ಕೊಡುವ ಸವಲತ್ತಿನ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ತನ್ನ ಪಾಲನ್ನು ಶೇ.60 ರಷ್ಟು ಕಡಿಮೆ ಮಾಡಿದೆ. ಸಮಸ್ಯೆ ಮರೆಮಾಚಲು ದೇವರು ದೇವಸ್ಥಾನದ ಹಿಂದೆ ಬಿದ್ದಿದೆ. ನಿಜವಾದ ದೇವರಾದ ಮಹಿಳೆಯರನ್ನು ಶೋಷಿಸುತ್ತಿದೆ ಎಂದರು‌ . 2021 ರಲ್ಲಿ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಕೊಡಬೇಕಾದ 1900 ಕೋಟಿ ರೂ.ಅನುದಾನ ಕಡಿತ‌ ಮಾಡಿತು ಎಂದು ಅಪಾದಿಸಿದರು.

ಐಸಿಡಿಎಸ್ , ಎಂಡಿಎಂ, ಎನ್ ಎಚ್ ಎಂ, ಎಸ್ ಎಸ್ ಎ ಮುಂತಾದ ಯೋಜನೆಗಳನ್ನು ಖಾಯಂ ಮಾಡಿ, ಅವುಗಳನ್ನು ಹಕ್ಕುಗಳನ್ನು ಸಾರ್ವತ್ರಿಕಗೊಳಿಸಬೇಕು. ಬಿಸಿಯೂಟ ನೌಕರರಿಗೆ ಭದ್ರತೆ ನೀಡಬೇಕು. ನಿವೃತ್ತಿಯಾದವರಿಗೆ ಇಡುಗಂಟು ಮೊತ್ತ ಕೊಡಬೇಕು. ಅಂಗನವಾಡಿ ನೌಕರರ ವೇತನವನ್ನು ರಾಜ್ಯ ಸರ್ಕಾರದ ಮಾದರಿಯಲ್ಲಿ ಹೆಚ್ಚಿಸಬೇಕು ,ಗ್ರಾಜ್ಯುಯಿಟಿ ನೀಡಿ, ಕಾರ್ಮಿಕ ಪರ ನೀತಿಗಳನ್ನು ಜಾರಿ ಮಾಡಬೇಕೆಂದು ಆಗ್ರಹಿಸಿದರು.

ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ ತುಂಬಬೇಕು ಎಂದು ಆಗ್ರಹಿಸಿದರು‌ . ಕೂಸಿನ ಮನೆ ಯೋಜನೆ ಕೈಬಿಡಲು ಅವರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಜಯಶ್ರೀ ಹಿರೇಕರ್ ಮಾತನಾಡಿ ‌ಕೊಳಿಮೊಟ್ಟೆ, ಗ್ಯಾಸ್, ತರಕಾರಿ, ಮೊಬೈಲ್ ಕರೆನ್ಸಿ ಹಾಕಲು ಸರ್ಕಾರ ಮುಂಗಡ ಹಣ ಬಿಡುಗಡೆ ಮಾಡಬೇಕು ಎಂದರು.
ಖಜಾಂಚಿ ಲಲಿತಾ ಹೆಗಡೆ, ಸಂಘಟನಾ ಕಾರ್ಯದರ್ಶಿಗಳಾದ ವಿದ್ಯಾ ವೈದ್ಯ, ಗೀತಾ ನಾಯ್ಕ
ಜಿಲ್ಲೆಯ ಎಲ್ಲಾ ತಾಲೂಕುಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
……

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button