
Crime
ಉಡುಪಿ | CITU ನೇತೃತ್ವದಲ್ಲಿ ಸಂಸದರ ಕಛೇರಿ ಚಲೋ ಹೋರಾಟ
ಸಿಐಟಿಯು ನೇತ್ರತ್ವದಲ್ಲಿ ದೇಶಾದ್ಯಂತ 3ದಿನಗಳ ಸಂಸದರ ಕಛೇರಿ ಚಲೋ ಹೋರಾಟ ಉಡುಪಿಯಲ್ಲಿ ಇಂದು 3 ನೇ ದಿನ ಅಸಂಘಟಿತ ವಲಯದ ಕಟ್ಟಡ ಕಾರ್ಮಿಕರು ಮತ್ತು ಅಟೋ ಚಾಲಕರು ಜಿಲ್ಲಾಧಿಕಾರಿ ಕಛೇರಿ ಪ್ರತಿಭಟನೆ ನಡೆಸಿ ಸಂಸದರ ಅಪ್ತ ಕಾರ್ಯದರ್ಶಿ ಮೂಲಕ ಮನವಿ ನೀಡಲಾಯಿತು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಕೆ.ಶಂಕರ್,ಉಪಾಧ್ಯಕ್ಷ ರಾದ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಸುರೇಶ್ ಕಲ್ಲಗಾರ್,ಕೋಶಾಧಿಕಾರಿ ಶಶಿಧರ ಗೊಲ್ಲ,ಸಿಐಟಿಯು ಉಡುಪಿ ವಲಯ ಸಂಚಾಲಕರಾದ ಕವಿರಾಜ್. ಎಸ್,ಮುಖಂಡರಾದ ಉಮೇಶ್ ಕುಂದರ್, ನಳಿನಿ,ಮೋಹನ್, ಕಟ್ಟಡ ಸಂಘದ ಕುಂದಾಪುರ ಮುಖಂಡರಾದ ಸಂತೋಷ್ ಹೆಮ್ಮಾಡಿ,ಚಿಕ್ಕ ಮೋಗವೀರ,ಮಧು ಶ್ರೀ, ಉಡುಪಿ ಕಟ್ಟಡ ಸಂಘದ ಮುಖಂಡರಾದ ಶೇಖರ್ ಬಂಗೇರ,ರಾಮ ಕಾರ್ಕಡ,ಸುಭಾಶ್ ನಾಯಕ್ಕ್,ದಯಾನಂದ ಕೋಟ್ಯಾನ್, ಗಣೇಶ ನಾಯಕ್,ಪ್ರತಿಮಾ ಕಾಪು,ವಾಮನ ಪೂಜಾರಿ,ವಾಮನ ಬಂಗೇರ, ಅಟೋ ಚಾಲಕರ ಸಂಘದ ಮುಖಂಡರಾದ ಚಂದ್ರಶೇಖರ್, ರಾಜುದೇವಾಡಿಗ,ಸದಾಶಿವ ಪೂಜಾರಿ ಉಪಸ್ಥಿತರಿದ್ದರು.




