
ಕೊಡಗಿನ ಜನರು ಬಿಜೆಪಿಯ ಕಳಪೆ ಆಡಳಿತಕ್ಕೆ ಬೇಸೆತ್ತು ತಕ್ಕಪಾಠ ಕಲಿಸಿದ್ದಾರೆ | ಡಾ.ಮಥರ್ ಗೌಡ
ನುಡಿದಂತೆ ನಡೆದ ನಮ್ಮ ಸರಕಾರ ಮುಂದೆ ನನಗೆ ನೀಡಿದ ಐದು ವರ್ಷಗಳಲ್ಲಿ ಎಲ್ಕಾ ಯೋಜನೆಗಳನ್ನು ಅನುಷ್ಠಾನ ಗೊಳಿಸಿಯೇ ಸಿದ್ದ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಹೇಳಿದರು.
ಅವರು ಗಾಂದಿ ಮೈದಾನದಲ್ಲಿ ನಡೆದ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ರಾಜಕೀಯ ತುಂಬಾ ಕಷ್ಟದ ಕೆಲಸ ಅಂದಿದ್ದರೂ ಪಕ್ಷದ ಹಿರಿಯರು ನಾಯಕರುಗಳನ್ನು ನಿರಂತರವಾಗಿ ವಿಶ್ವಾಸವನ್ನು ತೆಗೆದುಕೊಂಡು ಕೆಲಸ ಮಾಡಿದಾಗ ನನಗೆ ಅವಕಾಶವನ್ನು ನೀಡಿದಾಗ ಕ್ಷೇತ್ರದ ಜನತೆ ಉತ್ತಮ ಅವಕಾಶ ನೀಡಿದ್ದೀರಿ ನಿಮ್ಮೆಲ್ಲಾ ಕಷ್ಟ ಸುಖಗಳಲ್ಲಿ ಸದಾ ನಿಮ್ಮೊಂದಿಗೆ ನಾನಿರುತ್ತೇನೆ ಎಂದರು. ಕೊಡಗಿನ ಜನತೆ ಬಿಜಿಪಿಗೆ ಉತ್ತಮ ಪಾಠ ಕಲ್ಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಬಹುಮತದೊಂದಿಗೆ ಗೆಲ್ಲಿಸಿ ಕೊಡುತ್ತೇವೆ ಎಂದು ಅಪಾರ ಕಾರ್ಯಕರ್ತರ ಸಮ್ಮುಖದಲ್ಲಿ ಮುಖ್ಯಮಂತ್ರಿಗೆ ಭರವಸೆ ನೀಡಿದರು.ಇದೇ ಸಂಧರ್ಭದಲ್ಲಿ ಗ್ರಾಮೀಣ ಭಾಗದ ರಸ್ತೆಗಳು,ಆಸ್ಪತ್ರೆಗಳ ಜೀರ್ಣೋದ್ಧಾರಕ್ಕೆ ಅನುದಾನಕ್ಕೆ ಮನವಿ ಮಾಡಿದರು.




