Dakshina Kannada

ಮಂಗಳೂರು: ಕೋಲ ನಡೆಯುವಾಗ ಎದೆ ನೋವು ಕಾಣಿಸಿಕೊಂಡು ಮೃತಪಟ್ಟ ದೈವ ನರ್ತಕ

ಮಂಗಳೂರು: ದೈವದ ಕೋಲ ನಡೆಯುತ್ತಿರುವಾಗಲೇ ಎದೆ ನೋವು ಕಾಣಿಸಿಕೊಂಡು, ಆಸ್ಪತ್ರೆಗೆ ಸಾಗಿಸುವಾಗ ದೈವ ನರ್ತಕ ಮೃತಪಟ್ಟ ಘಟನೆ ಹಳೆಯಂಗಡಿಯಲ್ಲಿ ನಡೆದಿದೆ.

ದೈವ ನರ್ತಕ ಅಶೋಕ್ ಬಂಗೇರ ಗಂಧಕಾಡು(47) ಅವರು ದೈವದ ನೇಮ ನಡೆಯುತ್ತಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡು ಇಹಲೋಕ ತ್ಯಜಿಸಿದ್ದಾರೆ.

ಮಂಗಳೂರು ಹೊರವಲಯದ ಹಳೆಯಂಗಡಿ ಸಮೀಪ ಲೆಕ್ಕೆಸಿರಿ ದೈವದ ನೇಮದ ವೇಳೆ ಈ ಘಟನೆ ನಡೆದಿದೆ.
ಅಶೋಕ್ ಬಂಗೇರ ಗಂಧಕಾಡು ಅವರಿಗೆ ಗಗ್ಗರ ಸೇವೆಯಲ್ಲಿದ್ದಾಗಲೇ ತೀವ್ರ ಬಳಲಿಕೆ ಕಂಡು ಬಂದಿದೆ.
ಆ ಬಳಿಕ‌ ತೀವ್ರ ಎದೆನೋವು ಕಾಣಿಸಿಕೊಂಡ ಅಶೋಕ್ ಬಂಗೇರ ಗಂಧಕಾಡು‌ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಅವರು ಮೃತಪಟ್ಟಿದ್ದಾರೆ.
ಆ ಬಳಿಕ ನೇಮವನ್ನು ಅವರ ತಮ್ಮ ಮುಂದುವರಿಸಿದ್ದಾರೆ ಎಂದು ಹೇಳಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button