
Accident NewsUdupi
ಕಾಪು: ಬೈಕ್’ಗಳ ನಡುವೆ ಅಪಘಾತ – ಮೃತ್ಯು
ಕಾಪು : ಉಳಿಯಾರಗೋಳಿ ಕೋತಲಕಟ್ಟೆ ಎಂಬಲ್ಲಿ ಎರಡು ಬೈಕ್ ಗಳ ಮಧ್ಯೆ ರವಿವಾರ ಸಂಜೆ ನಡೆದ ಮುಖಾಮುಖಿ ಅಪಘಾತದಲ್ಲಿ ಓರ್ವ ಮೃತ ಪಟ್ಟು, ಇಬ್ಬರು ಸವಾರರು ಗಾಯಗೊಂಡ ಬಗ್ಗೆ ವರದಿಯಾಗಿದೆ.
ಬಕ್ ಸಹ ಸವಾರ ಪಾಂಗಾಳ ದುರ್ಗಾ ವೆಲ್ ರಿಂಗ್ ವರ್ಕ್ಸ್ ಕಾರ್ಮಿಕ ಮಲ್ಲೇಶ್ (೫೩) ಮೃತ ಪಟ್ಟಿದ್ದು, ಬೈಕ್ ಸವಾರ ಜಯನ್ ಗಾಯಗೊಂಡಿದ್ದಾರೆ.
ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಪಲ್ಸರ್ ಬೈಕ್ ಮತ್ತು ಉಳಿಯಾರಗೋಳಿ ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ಹೋಂಡಾ ಫ್ಯಾಶನ್ ಬೈಕ್ ಪರಸ್ಪರ ಢಿಕ್ಕಿಯಾಗಿದೆ.
ಅಪಘಾತದ ರಭಸಕ್ಕೆ ಸಹ ಸವಾರನಾಗಿದ್ದ ಮಲ್ಲೇಶ್ ರಸ್ತೆಗೆ ಎಸೆಯಲ್ಪಟ್ಟಿದ್ದು ತಲೆಗೆ ತೀವ್ರ ಗಾಯಗಳುಂಟಾಗಿತ್ತು. ಸವಾರ ಜಯನ್ ಕಾಲು ಮುರಿತಕ್ಕೊಳಗಾಗಿದ್ದು ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದು ಅಲ್ಲಿ ಮಲ್ಲೇಶ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಪಲ್ಸರ್ ಬೈಕ್ ಸವಾರ ಶ್ರೀನಿವಾಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
—




