
Featured StoryState News
Uttarakannada | ಬಾಲಕನ ಅಪಹರಣ : ದೂರು ದಾಖಲು
ಕಾರವಾರ : ಹೊನ್ನಾವರ ತಾಲ್ಲೂಕಿನ ಕಾಸರಕೋಡ ,ಮಜಿರೆ ಟೊಂಕಾ-2 ನಿವಾಸಿ
ಮಹಮ್ಮದ್ ರಿಹಾನ್(14 ವರ್ಷ) ಎಂಬ ಬಾಲಕ ಅಪಹರಣ ವಾಗಿದ್ದನೆಂದು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಹಮ್ಮದ್ ರಿಹಾನ್ ಜ.16 ರಂದು ಸಂಜೆ 5-30 ಗಂಟೆಗೆ ಟೊಂಕಾ-2ದಲ್ಲಿರುವ ತನ್ನ ಮನೆ ಮುಂದೆ ಆಟವಾಡುತ್ತಿದ್ದಾಗ ಅಪಹರಣವಾಗಿರುತ್ತಾನೆ.
ಕಾಣೆಯಾದ ಬಾಲಕನ ಚಹರೆ: ದುಂಡನೆಯ ಮುಖ, ಗೋಧಿ ಮೈ ಬಣ್ಣ, ಸದೃಡ ಮೈಕಟ್ಟು ಹೊಂದಿದ್ದಾನೆ.
4.2 ಅಡಿ ಎತ್ತರ ಇದ್ದು, ಕನ್ನಡ, ಉರ್ದು,ಹಿಂದಿ,ಕೊಂಕಣಿ ಭಾಷೆ ಮಾತನಾಡುತ್ತಾನೆ. ಹೊನ್ನಾವರ ನ್ಯೂ ಇಂಗ್ಲೀಷ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದ ಈ ಬಾಲಕ ತಿಳಿ ಗುಲಾಬಿ ಹಾಗೂ ಗ್ರೇ ಬಣ್ಣದ ಟಿ ಶರ್ಟ್ ,ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಈ ಬಾಲಕನು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಹೊನ್ನಾವರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08387-220248,ಮೊಬೈಲ್ ನಂ. 9480805270 ಸಂಪರ್ಕಿಸುವಂತೆ ಎಂದು ಹೊನ್ನಾವರ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




