Crime

ಬಾಲಕೋಟ್ ವಾಯುದಾಳಿ, ಎರಡನೇ ವಾರ್ಷಿಕೋತ್ಸವ

ನವದೆಹಲಿ,ಫೆ.26:- ಬಾಲಕೋಟ್ ವಾಯುದಾಳಿಯ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ವಾಯುಪಡೆಯ ಧೈರ್ಯ ಮತ್ತು ಶ್ರದ್ಧೆಗೆ ವಂದಿಸಿದ್ದಾರೆ.
ಬಾಲಕೋಟ್ ವಾಯುದಾಳಿಯ ವಾರ್ಷಿಕೋತ್ಸವದಂದು ಭಾರತೀಯ ವಾಯುಪಡೆಯ ಅಸಾಧಾರಣ ಧೈರ್ಯ ಮತ್ತು ಶ್ರದ್ಧೆಗೆ ವಂದಿಸುತ್ತಿದ್ದೇನೆ. ಬಾಲಕೋಟ್ ದಾಳಿಯ ಯಶಸ್ಸು, ಭಯೋತ್ಪಾದನೆ ವಿರುದ್ಧದ ಭಾರತದ ದೃಢ ಇಚ್ಛೆಯನ್ನು ತೋರಿಸಿದೆ. ದೇಶವನ್ನು ಸುರಕ್ಷಿತವಾಗಿರಿಸಿರುವ ಸಶಸ್ತ್ರ ಪಡೆಗಳ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ರಕ್ಷಣಾ ಸಚಿವರು ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ 2019 ರ ಫೆಬ್ರವರಿ 14 ರಂದು ದಕ್ಷಿಣ ಕಾಶ್ಮೀರದ ಪುಲ್ವಾಮಾ ಬಳಿಯ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಿಆರ್ ಪಿಎಫ್ ಬೆಂಗಾವಲು ಪಡೆ ಮೇಲೆ ನಡೆಸಿದ ದಾಳಿಯಲ್ಲಿ 40 ಕ್ಕೂ ಹೆಚ್ಚು ಸಿಆರ್ ಪಿಎಫ್ ಸಿಬ್ಬಂದಿ ಹುತಾತ್ಮರಾದ ಕೆಲ ದಿನಗಳ ನಂತರ ಬಾಲಾಕೋಟ್ ನಲ್ಲಿ ವೈಮಾನಿಕ ದಾಳಿ ನಡೆಸಲಾಗಿತ್ತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button