
`ಸುಮಾರ್ಗ’ ಯೋಜನೆ ಅನುದಾನ ಶಾಸಕರಿಗೆ ಸಿಎಂ ಕಚೇರಿಯಿಂದಲೇ ನೇರ ಹಂಚಿಕೆ !
ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಉತ್ತಮ ರಸ್ತೆಗಳನ್ನು ನಿರ್ಮಿಸಲು ರೂಪಿಸಿರುವ ‘ಸುಮಾರ್ಗ’ ಯೋಜನೆಗೆ ಮೀಸಲಿಟ್ಟ ಅನುದಾನವನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯ ಗಮನಕ್ಕೂ ತಾರದೇ ಮುಖ್ಯಮಂತ್ರಿ ಕಚೇರಿ ನೇರವಾಗಿ 81 ಶಾಸಕರಿಗೆ ಹಂಚಿಕೆ ಮಾಡಿರುವುದು ಬಿಜೆಪಿಯಲ್ಲೇ ಅಸಮಾಧಾನ ಹುಟ್ಟು ಹಾಕಿದೆ.
ಸಚಿವ ಸ್ಥಾನ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗದಿರುವ ಕಾರಣಕ್ಕೆ ಸಿಟ್ಟಾಗಿರುವ, ತಮ್ಮ ಮಾತಿಗೆ ಬೆಲೆಯೇ ಸಿಗುತ್ತಿಲ್ಲ ಎಂದು ಆಕ್ರೋಶಗೊಂಡಿರುವ ಶಾಸಕರನ್ನು ಓಲೈಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ದಾರಿ ಹಿಡಿದಿದ್ದಾರೆ ಎಂಬ ಚರ್ಚೆ ಬಿಜೆಪಿ ‘ಗರ್ಭಗುಡಿ’ಯಲ್ಲೇ ಶುರುವಾಗಿದೆ.
ರಾಜ್ಯದಲ್ಲಿ ಐದು ವರ್ಷಗಳ ಅವಧಿಯಲ್ಲಿ 20 ಸಾವಿರ ಕಿ.ಮೀ ಸುವ್ಯವಸ್ಥಿತ ರಸ್ತೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿತ್ತು. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ರೀತಿಯ ಮಾನದಂಡಗಳನ್ನು ರೂಪಿಸಲಾಗಿತ್ತು. 2020-21ನೇ ಸಾಲಿನ ಬಜೆಟ್ನಲ್ಲಿ ಮೊದಲ ಕಂತು ರೂ. 780 ಕೋಟಿ ಮೀಸಲಿಡಲಾಗಿತ್ತು. ಆದರೆ, ಕೋವಿಡ್ ಸಂಕಷ್ಟದ ಕಾರಣಗಳನ್ನು ಮುಂದಿಟ್ಟು 10 ತಿಂಗಳು ಕಳೆದರೂ ಯೋಜನೆ ಅನುμÁ್ಠನಕ್ಕೆ ಅನುಮೋದನೆ ನೀಡಿರಲಿಲ್ಲ. ಈಗ ಮುಖ್ಯಮಂತ್ರಿಯೇ ಖುದ್ದು ಆಸಕ್ತಿ ವಹಿಸಿ ಆದೇಶ ಹೊರಡಿಸಿ, ಹಣಕಾಸು ಇಲಾಖೆ ಮೂಲಕ ರೂ. 775 ಕೋಟಿಯನ್ನು 81 ಶಾಸಕರಿಗೆ ಹಂಚಿಕೆ ಮಾಡಿದ್ದಾರೆ.
ಕೆಲವು ಜಿಲ್ಲೆಗಳಲ್ಲಿ ಬಿಜೆಪಿಯ ಹಲವು ಶಾಸಕರಿದ್ದರೂ ತಮಗೆ ಆಪ್ತರಾದ ಶಾಸಕರಿಗμÉ್ಟೀ ಅನುಕೂಲ ಮಾಡಿಕೊಡಲಾಗಿದೆ. ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಉಡುಪಿ, ತುಮಕೂರು, ಕೊಪ್ಪಳ, ಹಾವೇರಿ, ರಾಮನಗರ, ಧಾರವಾಡ, ಬಾಗಲಕೋಟೆ, ವಿಜಯಪುರ, ಚಿಕ್ಕಮಗಳೂರು, ರಾಯಚೂರು ಮೊದಲಾದ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಮನ್ನಣೆ ನೀಡಲಾಗಿದೆ. ಉಳಿದ ಕ್ಷೇತ್ರಗಳನ್ನು ಕಡೆಗಣಿಸಲಾಗಿದೆ. ವಿರೋಧ ಪಕ್ಷಗಳಿಗೆ ನೀಡಿದ ಆದ್ಯತೆಯನ್ನೂ, ಹಲವು ಸ್ವಪಕ್ಷೀಯ ಶಾಸಕರಿಗೆ ಯಡಿಯೂರಪ್ಪ ನೀಡಿಲ್ಲ’ ಎಂದು ಬಿಜೆಪಿ ಮುಖಂಡರೊಬ್ಬರು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಬಿಡುಗಡೆ ಮಾಡಿದ ಅಷ್ಟೂ ಮೊತ್ತಕ್ಕೂ ಟೆಂಡರ್ ಕರೆಯದೇ ತುಂಡು ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ‘ಸುಮಾರ್ಗ’ದ ಪರಿಕಲ್ಪನೆಗೆ ವಿರುದ್ಧವಾಗಿ 5 ಲಕ್ಷದ ಒಳಗೆ ಸಣ್ಣ ಸಣ್ಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂಬ ಆರೋಪವನ್ನೂ ಶಾಸಕರು ಮಾಡಿದ್ದಾರೆ.
ಅನುದಾನ ಪಡೆದ 81 ಶಾಸಕರಲ್ಲಿ ಬಿಜೆಪಿಯ 32 ಶಾಸಕರಿಗೆ ತಲಾ ಗರಿಷ್ಠ ರೂ. 23 ಕೋಟಿವರೆಗೂ ಹಂಚಿಕೆ ಮಾಡಲಾಗಿದೆ. ಕಾಂಗ್ರೆಸ್ನ 30, ಜೆಡಿಎಸ್ನ 18 ಹಾಗೂ ಬಿಎಸ್ಪಿಯ ಒಬ್ಬರು ಶಾಸಕರಿಗೆ ತಲಾ ರು. 5 ಕೋಟಿ ದೊರೆತಿದೆ. ಬಿಜೆಪಿಯೇತರ 49 ಶಾಸಕರಿಗೆ ಒಟ್ಟು 245 ಕೋಟಿ ಹಂಚಿಕೆ ಮಾಡಿದ್ದರೆ, ಬಿಜೆಪಿಯ 32 ಶಾಸಕರಿಗೆ ಒಟ್ಟು 530 ಕೋಟಿ ಕೊಡಲಾಗಿದೆ.




