
ಮಾ.11 ರಂದು ಕರ್ಣಂಗೇರಿ ಶ್ರೀರಾಜರಾಜೇಶ್ವರಿ ದೇವಾಲಯದಲ್ಲಿ ಶಿವರಾತ್ರಿ ದೀಪೋತ್ಸವ
ಮಡಿಕೇರಿ ಮಾ.4 : ನಗರದಂಚಿನಲ್ಲಿರುವ ಕರ್ಣಂಗೇರಿ ಕ್ಷೇತ್ರದ ಶ್ರೀರಾಜರಾಜೇಶ್ವರಿ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಮಾ.11 ರಂದು ದೀಪೋತ್ಸವದೊಂದಿಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಸದಸ್ಯ ಹೆಚ್.ಎಸ್. ದೇವರಾಜು(ಮಣಿ) ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಕಾಶಿಯಿಂದ ತಂದು ಪ್ರತಿಷ್ಟಾಪಿಸಲಾಗಿರುವ ಶಿವಲಿಂಗಕ್ಕೆ ಅಂದು ಬೆಳಗ್ಗೆ 9 ಗಂಟೆಗೆ ವಿಶೇಷ ಅರ್ಚನೆ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಎಳನೀರು ಅಭಿಷೇಕ, ಮಹಾಭಿಷೇಕ ಮತ್ತು ಮಹಾಮಂಗಳಾರತಿ ನಡೆಯಲಿದ್ದು, ಸಂಜೆ 7 ಗಂಟೆಗೆ ದೇವಿಯ ದರ್ಶನದ ನಂತರ ದೇವಾಲಯದ ಆವರಣದಲ್ಲಿ ‘ದೀಪೋತ್ಸವ’ ಜರುಗಲಿದೆ. ಭಕ್ತಾದಿಗಳು ಉತ್ಸವದ ಅಂಗವಾಗಿ ಎಳ್ಳು ಬತ್ತಿಯನ್ನು ಹಚ್ಚಬಹುದೆಂದು ಮಾಹಿತಿ ನೀಡಿದರು.
ಕೋವಿಡ್ ಮುನ್ನೆಚ್ಚರಿಕಾ ಕ್ರಮವಾಗಿ ದೇವಾಲಯದ ಸುತ್ತಮುತ್ತ ಒಂದು ದಿನ ಮುಂಚಿತವಾಗಿ ಸ್ಯಾನಿಟೈಸರ್ ಮಾಡಲಾಗುವುದು. ಆಗಮಿಸುವ ಎಲ್ಲಾ ಭಕ್ತರಿಗೂ ಬೆಳಗಿನ ಉಪಹಾರ ಹಾಗೂ ರಾತ್ರಿ ಭೋಜನ ವ್ಯವಸ್ಥೆಯನ್ನು ಏರ್ಪಡಿಸಲಾಗುವುದು. ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ದೇವಾಲಯದ ಧರ್ಮದರ್ಶಿ ಹೆಚ್.ಎಸ್.ಗೋವಿಂದಸ್ವಾಮಿ ಮಾತನಾಡಿ, ಕೋವಿಡ್‌ನಿಂದಾಗಿ ದೇಶಾದ್ಯಂತ ಸಾಕಷ್ಟು ಸಾವು, ನೋವುಗಳು ಸಂಭವಿಸಿದ್ದು, ಜನ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಆದರೆ, ಭಾರತದ ಜನ ದೇವರ ಮೇಲಿಟ್ಟಿರುವ ನಂಬಿಕೆಯಿAದ ಕೋವಿಡ್ ಹೊರ ರಾಷ್ಟçಗಳಲ್ಲಿ ತೋರಿದ ಅಟ್ಟಹಾಸವನ್ನು ಇಲ್ಲಿ ತೋರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ದೇವಾಲಯ ಆಡಳಿತ ಮಂಡಳಿಯ ಸದಸ್ಯರಾದ ವಿ.ಸಚಿನ್ ವಾಸುದೇವ್, ಜಿ.ಕಿರಣ್ ಕುಮಾರ್, ಎಸ್.ಎನ್.ಸೂದನ ಹರೀಶ್ ಹಾಗೂ ಎ.ಸಿ.ಚುಮ್ಮಿದೇವಯ್ಯ ಉಪಸ್ಥಿತರಿದ್ದರು.




