ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಭಾಲ್ಕಿ ನಂಟು
ದಾಖಲಾಯಿತು ಯುವಕನ ಅಪಹರಣ ಪ್ರಕರಣ !
ಬೀದರ್: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬAಧಿಸಿದAತೆ ವಿಶೇಷ ತನಿಖಾ ದಳವು ಭಾಲ್ಕಿ ಪಟ್ಟಣದ ಯುವಕನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿರುವ ಘಟನೆ ಹೊಸ ತಿರುವು ಪಡೆದಿದೆ.
ಭಾಲ್ಕಿ ಪಟ್ಟಣದ ವಾಲಿ ಗಲ್ಲಿ ನಿವಾಸಿ ಆಗಿರುವ ಅಭಿಷೇಕ ಎಂಬ ಯುವಕನನ್ನು ಮಾರ್ಚ್ 11 ರಂದು ಎಸ್ಐಟಿ ಅಧಿಕಾರಿಗಳು ವಿಚಾರಣೆಗಾಗಿ ಕರೆದೊಯ್ದಿದ್ದರು. ಈ ಮಧ್ಯೆ ಅಭಿಷೇಕ್ ಪರಿವಾರದವರು ಭಾಲ್ಕಿ ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಅಭಿಷೇಕನನ್ನು ಅಪಹರಣ ಮಾಡಿಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 11 ರಂದು ಅಭಿಷೇಕ ಮನೆಯಿಂದ ಹೊರಗೆ ಹೋಗಿದ್ದ. ನಂತರ ಮನೆಗೆ ಮರಳಿಲ್ಲ. ಮನೆ ಎದುರಿನ ಸಿಸಿ ಟಿವಿ ಕ್ಯಾಮೆರಾದಲ್ಲಿ ಮೂವರು ಯುವಕರು ಅಭಿಷೇಕನನ್ನು ಕರೆದುಕೊಂಡು ಹೋಗಿರುವ ದೃಶ್ಯ ದಾಖಲಾಗಿದೆ ಎಂದು ಅಭಿಷೇಕ್ ಚಿಕ್ಕಪ್ಪ ಅರವಿಂದ ಎಂಬುವರು ಭಾಲ್ಕಿ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.
ಎಸ್ಐಟಿ ವಶಕ್ಕೆ ಪಡೆದಿರುವ ಯುವಕ ಸಂತ್ರಸ್ತ ಯುವತಿಯ ಸ್ನೇಹಿತನಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಯುವಕನ ಬಳಿ ಲ್ಯಾಪ್ಟಾಪ್ ಮತ್ತು ಸಿಡಿ ಸಿಕ್ಕಿವೆ ಎಂದು ಹೇಳಲಾಗಿದೆ.




