
ಐದು ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಳ
ನವದೆಹಲಿ : ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಗುಜರಾತ್ ಮತ್ತು ತಮಿಳುನಾಡುಗಳಲ್ಲಿ ನಿತ್ಯ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. 28,903 ಹೊಸ ಸೋಂಕುಗಳಲ್ಲಿ ಶೇ.71.10ರಷ್ಟು ಪ್ರಕರಣಗಳು ಈ ಐದು ರಾಜ್ಯಗಳಲ್ಲಿ ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.
83.91 ರಷ್ಟು ಹೊಸ ಪ್ರಕರಣಗಳು ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಗುಜರಾತ್ ಮತ್ತು ತಮಿಳುನಾಡು ಮತ್ತು ಕೇರಳದಲ್ಲಿ ದಾಖಲಾಗಿವೆ.
ಮಹಾರಾಷ್ಟ್ರವೊಂದರಲ್ಲೇ 17,864 ಪ್ರಕರಣಗಳು ದಾಖಲಾಗಿದ್ದು, ನಿತ್ಯ ಹೊಸ ಹೊಸ ಪ್ರಕರಣಗಳ ಸಂಖ್ಯೆ ಶೇ 61.8ರಷ್ಟಿದೆ. ಕೇರಳ 1,970, ಪಂಜಾಬ್ ನಲ್ಲಿ 1,463 ಹೊಸ ಪ್ರಕರಣಗಳು ವರದಿಯಾಗಿವೆ. ಕಳೆದ ಒಂದು ತಿಂಗಳಿನಿAದ ಕೇರಳದಲ್ಲಿ ನಿರಂತರವಾಗಿ ಇಳಿಮುಖವಾಗುತ್ತಿದೆ.
ಭಾರತದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,34,406 ಕ್ಕೆ ತಲುಪಿದ್ದು, ಶೇ.2.05ರಷ್ಟು ಸೋಂಕುಗಳು ಕಂಡುಬAದಿದೆ. ‘ಭಾರತದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇ 76.4ರಷ್ಟು ಮಹಾರಾಷ್ಟ್ರ, ಕೇರಳ ಮತ್ತು ಪಂಜಾಬ್ ನಲ್ಲಿ ಶೇ.60ರಷ್ಟು ಇದೆ’ ಎಂದು ಸಚಿವಾಲಯ ಹೇಳಿದೆ.
ಬುಧವಾರ ಬೆಳಗ್ಗೆ 7 ರವರೆಗೆ ತಾತ್ಕಾಲಿಕ ವರದಿ ಪ್ರಕಾರ, 3.5 ಕೋಟಿ (3,50,64,536) ಲಸಿಕೆ ಡೋಸ್ ಗಳನ್ನು 5,86,855 ಸೆಷನ್ ಮೂಲಕ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.




