Crime

ಸಂಚಾರ ಪೊಲೀಸ್‍ರಿಂದ 2.35 ಕೋಟಿ ರೂ.ದಂಡ ವಸೂಲಿ

ಬೆಂಗಳೂರು,ಅ.3(ಯುಎನ್‍ಐ):- ಬೆಂಗಳೂರು ನಗರ ಸಂಚಾರ ಪೆÇಲೀಸರು ಸೆಪ್ಟಂಬರ್ 20 ರಿಂದ 26ರವರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ 55,717 ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ 2,35,33,100 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಚಾಲಕರನ್ನು ಭೌತಿಕವಾಗಿ ತಡೆದು ಸಂಚಾರ ನಿಯಮ ಉಲ್ಲಂಘನಾ ಪ್ರಕರಣಗಳನ್ನು ದಾಖಲು ಮಾಡುವ ಪದ್ಧತಿಯನ್ನು ಕಳೆದ ಮಾರ್ಚ ತಿಂಗಳಿಂದ ತಾತ್ಕಾಲಿಕವಾಗಿ ನಿಬರ್ಂಧಿಸಲಾಗಿತ್ತು. ಲಾಕ್ ಡೌನ್ ಸಡಿಲಿಕೆಯ ನಂತರ ವಾಹನ ಓಡಾಟ ಹೆಚ್ಚಾದಂತೆ ಸಂಚಾರ ನಿಯಮ ಉಲ್ಲಂಘನೆಯು ಹೆಚ್ಚಾಗಿದ್ದರಿಂದ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿಕೊಂಡು ವಾಹನ ಚಾಲಕರನ್ನು ಭೌತಿಕವಾಗಿ ತಡೆದು ಪ್ರಕರಣಗಳನ್ನು ದಾಖಲಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೆÇಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.
ಯದ್ವಾತದ್ವ ದ್ವಿ ಚಕ್ರ ವಾಹನ ಚಾಲನೆಯ 108 ಪ್ರಕರಣದಲ್ಲಿ 66,000 ರೂ.ದಂಡ, ಅತಿವೇಗದ 17 ಪ್ರಕರಣದಲ್ಲಿ 5100 ರೂ., ಕುಡಿದು ವಾಹನ ಚಾಲನೆಯ 4 ಪ್ರಕರಣ, ಡಿಸ್ ಪ್ಲೇ ಇಲ್ಲದೆ ಚಾಹನೆ 2, ಎಲ್ಲೆಂದರಲ್ಲಿ ಪಾಕಿರ್ಂಗ್ 2398 ಪ್ರಕರಣದಲ್ಲಿ 7,08200 ರೂ., ಡಿಎಲ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆಯ 394 ಪ್ರಕರಣದಲ್ಲಿ 2,11,000 ರೂ., ಲೈನ್ ಶಿಸ್ತುಪಾಲಿಸದ 480 ಪ್ರಕರಣದಲ್ಲಿ 1,96,900 ರೂ.,ಸಮವಸ್ತ್ರ ಧರಿಸದ 273 ಪ್ರಕರಣದಲ್ಲಿ 124600 ರೂ., ವಸೂಲಿ ಮಾಡಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button