Crime

ಮಹಿಳೆಯ ಮೇಲೆ ಬಿಸಿ ಎಣ್ಣೆ ಎರಚಿದ ರೌಡಿ ಶೀಟರ್ ಕಾಲಿಗೆ ಗುಂಡೇಟು

ಬೆಂಗಳೂರು, ಅ.3(ಯುಎನ್‍ಐ):- ಸಿಗರೇಟು ತೆಗೆದುಕೊಂಡಿದ್ದ ಹಣ ಕೇಳಿದ್ದಕ್ಕೆ ಬಿಸಿ ಎಣ್ಣೆಯನ್ನು ಅಂಗಡಿ ಮಾಲೀಕರಾದ ಮಹಿಳೆಯ ಮೇಲೆ ಎರಚಿ ತಲೆಮರೆಸಿಕೊಂಡಿದ್ದ ರೌಡಿಯೊಬ್ಬನನ್ನು ಪೊಲೀಸರು ಇಂದು ಬೆಳಗ್ಗೆ ಕಾಲಿಗೆ ಗುಂಡಿಕ್ಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಥಣಿಸಂದ್ರ ಮುಖ್ಯರಸ್ತೆ, ಬರುಣಿ ಗಲ್ಲಿ ಅಮರ್ ಜ್ಯೋತಿ ಲೇಔಟ್ ಬೇಕರಿ ನಿವಾಸಿ, ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ರೌಡಿ ಶೀಟರ್ ಸೈಯದ್ ಹನೀಫ್ (26) ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.
ಸೆ.30ರಂದು ಸಂಜೆ 7.30ಕ್ಕೆ ಅಮರಜ್ಯೋತಿ ಬಡಾವಣೆಯಲ್ಲಿ ಬೇಕರಿ ಮತ್ತು ಬೋಂಡಾ ಬಜ್ಜಿ ವ್ಯಾಪಾರ ಮಾಡುತ್ತಿದ್ದ ಮೇಘಲಾ ಎಂಬವರ ಬೇಕರಿಗೆ ಆರೋಪಿ ಹನೀಪ್, ಅತಿಕ್ರಮ ಪ್ರವೇಶ ಮಾಡಿ ಸಿಗರೇಟ್ ಪ್ಯಾಕೇಟ್ ತೆಗೆದುಕೊಂಡು ಹೊರಗೆ ಬಂದಾಗ ಮೇಘಲಾ ಅವರು ಸಿಗರೇಟು ಹಣ ಕೇಳಿದ್ದಾರೆ. ಆಗ ಆರೋಪಿ ಅವಾಚ್ಯ ಶಬ್ದಗಳಿಂದ ಬೈದು ಮೇಘಲಾ ಅವರ ಮೈಮೇಲೆ ಬೋಂಡಾ ಕರಿಯುತ್ತಿದ್ದ ಬಿಸಿ ಎಣ್ಣೆಯನ್ನು ಚೆಲ್ಲಿ ಪರಾರಿಯಾಗಿದ್ದ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button