Featured StoryState News

ಧರ್ಮ ಪಾಲನೆ ಮಾಡುತ್ತಿರುವವರು ಕಾಂಗ್ರೆಸ್ ಪಕ್ಷ; ಧರ್ಮ ರಾಜಕಾರಣ ಮಾಡುತಿರುದು ಬಿಜೆಪಿ ಪಕ್ಷ – ಎ.ಎಸ್ ಪೊನ್ನಣ್ಣ


ಕಳೆದ ವಿಧಾನಸಭಾ ಚುನಾವಣೆ 2014 ರಲ್ಲಿ ಐದು ಗ್ಯಾರಂಟಿ ಭರವಸೆ ಕಾಂಗ್ರೆಸ್ ಪಕ್ಷ ನೀಡಿತ್ತು. ಅಧಿಕಾರಕ್ಕೆ ಬಂದ ನಂತರ ನುಡಿದಂತೆ ಎಲ್ಲಾ ಗ್ಯಾರೆಂಟಿಗಳನ್ನು ಈಡೇರಿಸಿದ್ದೇವೆ.ಇದು ದೇಶದಲ್ಲಿಯೇ ಪ್ರಥಮ ಎಂದು ಶಾಸಕ ಎ.ಎಸ್ ಪೊನ್ನಣ್ಣನವರು ಗೋಣಿಕೊಪ್ಪಲಿನ ಕಿತ್ತಳೆ ಬೆಳಗಾರರ ಸಂಘದ ಆವರಣದಲ್ಲಿ ಆಯೋಜಿಸಲಾಗಿದ್ದ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಬೂತ್ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಹೇಳಿದ್ದಾರೆ.

ನುಡಿದಂತೆ ನಡೆದಿರುವ ನಮ್ಮ ಸರ್ಕಾರದ ಗ್ಯಾರಂಟಿಯನ್ನು ಜನಗಳ ಮುಂದೆ ಹೋಗಿ ಹೇಳುವ ಮೂಲಕ ಲೋಕ ಸಭಾ ಅಭ್ಯರ್ಥಿ ಲಕ್ಷ್ಮಣ್ ಗೌಡ ಅವರಿಗೆ ಮತ ಕೇಳಬೇಕು ಎಂದು ಶಾಸಕ ಎ.ಎಸ್.ಪೊನ್ನಣ್ಣ ಇದೆ ಸಂದರ್ಭ ಮನವಿ ಮಾಡಿದರು.

ಧರ್ಮ ಪಾಲನೆ ಮಾಡುತ್ತಿರುವವರು ಕಾಂಗ್ರೆಸ್ ಪಕ್ಷ.ಧರ್ಮ ರಾಜಕಾರಣ ಮಾಡುತ್ತಿರುವವರು ನೀವು ಬಿಜೆಪಿ ಪಕ್ಷದವರು ಎಂದು ಹೇಳಿದರು. ನನ್ನ ಮನೆಗೆ ಯಾರು ಬೇಕಾದರೂ ಬರಬಹುದು ಆದರೆ ಅರಮನೆಗೆ ಹೋಗಬೇಕಾದರೆ ಟಿಕೆಟ್ ತೆಗೆದುಕೊಂಡೇ ಹೋಗಬೇಕು ಎಂದು ಪರೋಕ್ಷವಾಗಿ ಯದುವೀರ್ ರವರಿಗೆ ಟಾಂಗ್ ನೀಡಿದರು.ತಲಕಾವೇರಿ ಅಭಿವೃದ್ಧಿಗೆ ಹಾಗೂ ತುಲಾ ಸಂಕ್ರಮಣ ಆಚರಣೆಗೆ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರಲ್ಲಿ ಮನವಿ ಮಾಡಿದಾಗ ಕೂಡಲೇ ರೂ.2.60 ಕೋಟಿ ಬಿಡುಗಡೆ ಮಾಡಿ ಸಹಕರಿಸಿದ್ದಾರೆ. ಕೊಡಗು ಜಿಲ್ಲೆಯ ಅಭಿವೃದ್ಧಿಗೆ 350 ಕೋಟಿಗೂ ಹೆಚ್ಚು ಹಣ ಬಿಡುಗಡೆಗೊಂದು ಕಾಮಗಾರಿ ಆರಂಭಿಸಲಾಗಿದೆ ಎಂದರು.

2014 ರಲ್ಲಿ ಮನಮೋಹನ್ ಸಿಂಗ್ ಸರ್ಕಾರ ಅಧಿಕಾರ ತ್ಯಜಿಸುವಾಗ ಭಾರತದ ಸಾಲ ರೂ.55 ಲಕ್ಷ ಕೋಟಿ ಇತ್ತು.ಇದೀಗ ಬಿಜೆಪಿ ಸರ್ಕಾರದ 10 ವರ್ಷದ ಅವಧಿಯಲ್ಲಿ ಸಾಲದ ಪ್ರಮಾಣ ರೂ.188 ಲಕ್ಷ ಕೋಟಿ ಸಾಲವಿದೆ ಅಂದರೆ ಪ್ರತೀಯೊಬ್ಬ ಪ್ರಜೆಯ ಮೇಲೆ ರೂ.90000 ಸಾಲದ ಹೊರೆ ಇದೆ .ಅಭಿವೃದ್ಧಿಯ ಬಗ್ಗೆ ಮಾತ್ರ ನಾವು ಚಿಂತೆನೆ ಹರಿಸುತ್ತೇವೆ ಎಂದರಲ್ಲದೆ ಸಮಗ್ರ ಅಭಿವೃದ್ಧಿಗಾಗಿ ನಿಮ್ಮೆಲ್ಲರ ಮತವು ಈ ಬಾರಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಲಕ್ಷ್ಮಣಗೌಡ ಅವರಿಗೆ ನೀಡುವಂತೆ ಕರೆ ನೀಡಿದರು. ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಮುಖಂಡರು, ವಿವಿಧ ಘಟಕಗಳ ಅಧ್ಯಕ್ಷರುಗಳು ಹಾಗೂ ಬೂತ್ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button