Crime

ಸಿಡಿ ಯುವತಿಯನ್ನು ಭೇಟಿಯಾಗಿಲ್ಲ ಎಂದ ಶಿವಕುಮಾರ

ಬೆಂಗಳೂರು: ರಾಜಕಾರಣದಲ್ಲಿರುವ ನಮ್ಮಂತಹವರನ್ನು ದಿನಕ್ಕೆ ನೂರಾರು ಜನ ಭೇಟಿ ಮಾಡುತ್ತಾರೆ. ಅದರಂತೆ ನೊಂದ ಯುವತಿ ಕೂಡ ಭೇಟಿ ಮಾಡಲು ಪ್ರಯತ್ನಿಸಿರಬಹುದು. ಆದರೆ, ಆಕೆ ನನ್ನನ್ನು ಭೇಟಿ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಎಚ್‌ಎಎಲ್ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಸ್ಪಷ್ಟನೆ ನೀಡಿದರು. ರಮೇಶ್ ಜಾರಕಿಹೊಳಿ ಕಾಂಗ್ರೆಸ್‌ನ ಐದು ಮಂದಿ ಹಿರಿಯ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಾಗಿ ಹೇಳಿಕೆ ನೀಡಿದ್ದರು. ಆ ಸಂದರ್ಭದಲ್ಲಿ ನಾವು ರಾಜಕೀಯ ಪಕ್ಷವಾಗಿ ಎಚ್ಚೆತ್ತುಕೊಂಡು ನಿಗಾ ವಹಿಸಿದ್ದು ನಿಜ. ಅವರ ಚಟುವಟಿಕೆಗಳೇನು , ಯಾರ ಸಂಪರ್ಕದಲ್ಲಿದ್ದಾರೆ, ಏನೆಲ್ಲಾ ಮಾತನಾಡುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿದ್ದೆವು. ಆದರೆ, ಅವರ ಖಾಸಗಿ ವಿಷಯ ನಮಗೆ ಸಂಬAಧಪಟ್ಟಿರಲಿಲ್ಲ. ಅದರ ಅವಶ್ಯಕತೆ ನಮಗಿರಲಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.
ದಿನಬೆಳಗಾದರೆ ಹಲವಾರು ಮಂದಿ ನನ್ನ ಮನೆ ಮುಂದೆ ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಾರೆ. ನಮ್ಮಿಂದ ತೊಂದರೆಯಾದರೆ ಆಡಳಿತ ಪಕ್ಷ ಅಥವಾ ಮಾಧ್ಯಮಗಳ ಮುಂದೆ ಹೋಗುತ್ತಾರೆ. ರಾಜಕಾರಣದಲ್ಲಿ ಇದೆಲ್ಲಾ ಸಹಜ. ನಮ್ಮ ಕೈಲಾದಷ್ಟು ಸಹಾಯ ಮಾಡಿ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇವೆ. ಅದೇ ರೀತಿ ತೊಂದರೆಗೊಳಗಾದ ಯುವತಿ ನನ್ನನ್ನು ಭೇಟಿ ಮಾಡಲು ಬಂದಿರಬಹುದು ಎಂದರು.
ನರೇಶ ನನಗೆ ಬೇಕಾದ ಹುಡುಗ. ಮಾಧ್ಯಮದಲ್ಲಿರುವವನು. ನನ್ನನ್ನು ಆತ ಹಲವಾರು ಬಾರಿ ಭೇಟಿ ಮಾಡಿದ್ದಾನೆ. ನಾನು ಅವರ ಮನೆಗೆ ಹೋಗಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯದಲ್ಲಿ ಒಳ್ಳೆಯ ಪೊಲೀಸ್ ಅಧಿಕಾರಿಗಳಿದ್ದಾರೆ. ಯುವತಿ ಮತ್ತು ಅವರ ಕುಟುಂಬಕ್ಕೆ ಅವರು ರಕ್ಷಣೆ ನೀಡುತ್ತಾರೆ. ಯಾರು ಏನೇ ಹೇಳಿದರೂ ಅಧಿಕಾರಿಗಳ ಮೇಲೆ ನನಗೆ ನಂಬಿಕೆ ಇದೆ ಎಂದು ತಿಳಿಸಿದರು. ನನ್ನ ಕ್ಷೇತ್ರ ಕನಕಪುರ ಗಡಿ ಭಾಗಕ್ಕೆ ಹೊಂದಿಕೊAಡಿರುವ ತಮಿಳುನಾಡಿನ ಕೆಲವು ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button