CrimeUdupi

ಉಡುಪಿ | ಅಸ್ಥಿ ಪಂಜರ ಪತ್ತೆ

ಸಾಂದರ್ಭಿಕ ಚಿತ್ರ
ಉಡುಪಿ, ಏ.12; ಮೂಡುಸಗ್ರಿ ಶ್ರೀ ಆದಿಶಕ್ತಿ ದೇವಸ್ಥಾನದ ಸನಿಹದ ಮನೆಯ ಹಿಂಬಾಗದಲ್ಲಿ ಗಂಡಸಿನ ಅಸ್ಥಿಪಂಜರವು ಪತ್ತೆಯಾಗಿದೆ. ಮೃತ ವ್ಯಕ್ತಿಯ ಗುರುತುಪತ್ತೆಯಾಗಿಲ್ಲ. ವ್ಯಕ್ತಿ ಮೃತಪಟ್ಟು ತಿಂಗಳು ಕಳೆದಿರಬಹುದೆಂದು ಅಂದಾಜಿಸಲಾಗಿದೆ. ಸಾವಿನ ಕಾರಣ ತಿಳಿದುಬಂದಿಲ್ಲ. ರಾತ್ರಿಯ ಸಮಯದಲ್ಲಿ ಘಟನಾ ಸ್ಥಳದಲ್ಲಿ ಮಹಜರು ಪ್ರಕ್ರಿಯೆಗಳು ಪೋಲಿಸರಿಂದ ನಡೆದ ಬಳಿಕ ಕಳೇಬರವನ್ನು ಮಣಿಪಾಲ ಕೆ.ಎಂ.ಸಿ ವೈದ್ಯಕೀಯ ಪರೀಕ್ಷಾ ಘಟಕಕ್ಕೆ ಸಾಗಿಸಲಾಯಿತು. ಸಮಾಜಸೇವಕ ನಿತ್ಯಾನಂದ ಒಳಕಾಡುವರು, ಅಸ್ಥಿಪಂಜರದ ಸಾಗಟ ನಡೆಸಲು ಇಲಾಖೆಗೆ ಎಲ್ಲಾ ರೀತಿಯಲ್ಲೂ ಸಹಕರಿಸಿ ನೆರವಾದರು. ಅಸ್ಥಿ ಪಂಜರ ಪತ್ತೆಯಾಗಿರುವ ಸ್ಥಳದ ಮಾಲಿಕರು ಮುಂಬೈಯಲ್ಲಿ ವಾಸವಾಗಿದ್ದು, ಊರಿಗೆ ಬಂದಾಗ ಅವರಿಗೆ ಘಟನೆ ಕಂಡುಬಂದಿದೆ.

ಘಟನ ಸ್ಥಳದಲ್ಲಿದ್ದು ಡಿ.ವೈ.ಎಸ್.ಪಿ- ಟಿ.ಡಿ ಪ್ರಭು, ಉಡುಪಿ ಉಪ ವಿಭಾಗ, ಡಿ.ವಿ. ದೇವರಾಜ್ ಸರ್ಕಲ್ ಇನ್ಸ್‌ಪೆಕ್ಟರ್, ಪಿ.ಎಸ್ ಐ ರಾಘವೇಂದ್ರ ಕಾನೂನು ಪ್ರಕ್ರಿಯೆ ನಡೆಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button