
ಆ ಹೆಗಡೆ ಬದಲಿಗೆ ಈ ಹೆಗಡೆ ಇದ್ದಾರೆ : ಸುಮ್ಮನೆ ಮತ ಹಾಕಿ : ಬಸವಗೌಡ ಪಾಟೀಲ ಯತ್ನಾಳ್| ನನಗೂ ಜಿಗಜಿಣಗಿಗೂ ಡಿಶುಂ ಡಿಶುಂ ಇದೆ
ಕಾರವಾರ : ಆ ಹೆಗಡೆ ಬದಲಿಗೆ ಈ ಹೆಗಡೆ ಇದ್ದಾರೆ , ಸುಮ್ನ ಮತ ಹಾಕಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಶಾಸಕ, ಬಿಜೆಪಿ ಮುಖಂಡ ಬಸವಗೌಡ ಪಾಟೀಲ ಯತ್ನಾಳ್ ಹೇಳಿದರು .
ಕಾರವಾರದ ಅಂಬೇಡ್ಕರ್ ಸರ್ಕಲ್ ನಲ್ಲಿ ಶುಕ್ರವಾರ ಅವರು ಕಾಗೇರಿ ನಾಮಪತ್ರ ಸಲ್ಲಿಸುವ ಮುನ್ನ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಇನ್ನು ಮುಂದೆ ಕುಂಯಿ ಕುಂಯಿ ಅಂತ ಮಾತಾಡಬೇಡಿ. ಗಟ್ಟಿ ಹಿಂದುತ್ವ ಮಾತಾಡಿ ಅಂತ ಹೇಳಿದಿನಿ. ಅವರು ಸಹ ಇದಕ್ಕೆ ಒಪ್ಪಿದ್ದಾರೆಂದು ಯತ್ನಾಳ್ ಹೇಳಿದರು. ನಮ್ಮ ಜಿಲ್ಲೆಯಲ್ಲಿ ನನಗೂ ರಮೇಶ್ ಜಿಗಜಿಣಗಿ ಅವರಿಗೂ ಡಿಶುಂ ಡಿಶುಂ ಇದೆ. ಅವು ಇರ್ತಾವು. ಆದರೆ ನಮಗೆ ಬಿಜೆಪಿ ಮುಖ್ಯ. ದೇಶ ಮುಖ್ಯ. ನಾನು ಮುಖ್ಯಮಂತ್ರಿ ಆದರೆ ಯುಪಿ ಬುಲ್ಡೊಜರ್ ಕರ್ನಾಟಕಕ್ಕೆ ಬರಲಿದೆ. ಪಾಕಿಸ್ತಾನ ಜೈ ಅಂದವರ
ಎನ್ಕೌಂಟರ್ ಮಾಡಸ್ತಿನಿ ಎಂದು ಯತ್ನಾಳ್ ಭರವಸೆ ನೀಡಿದರು . ಯುಪಿಯಲ್ಲಿ ಯೋಗಿ ೭೦೦೦ ದೇಶ ವಿರೋಧಿಗಳಿಗೆ ಜನ್ನತ್ ತೋರಿಸಿದ್ದಾರೆ. ಹಾಗೆ ಕರ್ನಾಟಕದಲ್ಲಿ ನಾನು ಮುಖ್ಯಮಂತ್ರಿ ಆದರೆ ಹಿಂದುಗಳ ವಿರುದ್ಧ ಯಾರಾದರೂ ಮಾತಾಡಿದರೆ ಅವರನ್ನು ಡಿಶುಂ ಮಾಡ್ತಿನಿ ಎಂದರು. ಸ್ಪೀಕರ್ ಯು.ಟಿ .ಖಾದರ ವಿಧಾನ ಸಭೆಯಲ್ಲಿ ಮಾತಾಡಲು ಅವಕಾಶ ಕೊಟ್ಟಿದ್ರು. ನಾ ಮಾತಾಡಿದ್ದು ವಿಧಾನಸಭಾ ಕಡತದಲ್ಲಿದೆ. ಮೊಗಲರಿಂದ ಹಿಡಿದು ಗ್ರೇಟ್ ಅಕ್ಬರತನಕ, ನಮ್ಮ ಮೈಸೂರು ಟಿಪ್ಪುವಿನ ತನಕ ಮಾತಾಡಿನಿ . ಖಾದರ್ ವರೆಗೆ ಮಾತಾಡ್ತಿನಿ ಅಂದೆ. ಅದಕ್ಕ ಅವರು ನಾ ಸೆಕ್ಯುಲರ್ ಅದಿನಿ. ನನ್ನ ಯಾಕ ತಗೋತೀರಿ. ಪಾಕಿಸ್ತಾನ ಜೈ ಅನ್ನುವವರಿಗೆ ಎಷ್ಟಾದರೂ ಬೈಯಿರಿ ಎಂದು ಖಾದರ ಹೇಳಿದರು. ಅದನ್ನು ನಾ ಮಾಡಿದೆ ಎಂದು ಯತ್ನಾಳ್ ಹೇಳಿದರು. ನಾ ಹಿಂದೂ ಅದಿನಿ. ಲಿಂಗಾಯತ್ ಅದಿನಿ. ನನ್ನ ಟಚ್ ಮಾಡಾಕ ಯಾರಿಂದಲೂ ಸಾಧ್ಯವಿಲ್ಲ ಎಂದರು .
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾಬರು ನಮ್ಮ ಮನೆ ನುಗ್ಗಿ ಹೊಡಿತಾರ. ಅವರು ನಮಗೆ ಹಿಡದರೂ ಅರೆಸ್ಟ ಮಾಡದಂತ ಕಾನೂನು ಕಾಂಗ್ರೆಸ್ ತರಲಿದೆ ಎಂದು ಅಪಾದಿಸಿದರು .




