Uttara Kannada

ಗಡಿ ಸಮಸ್ಯೆ ಗಮನಸೆಳೆಯಲು ಎಂಇಎಸ್ ನಾಮಪತ್ರ

ಕಾರವಾರ : ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಮುನ್ನೆಲೆಗೆ ತರಲು ಎಂಇಎಸ್ ಮುಂದಾಗಿದ್ದು, ಉತ್ತರ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ನಿರಂಜನ ಸರ್ದೇಸಾಯಿ ಎಂಇಎಸ್ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು.


ರಣಜಿತ್ ಪಾಟೀಲ ಸಹ ಎಂಇಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಚುನಾವಣೆಗೆ ನಿಂತ ಇಬ್ಬರಲ್ಲಿ ಒಬ್ಬರು ಚುನಾವಣಾ ಕಣದಲ್ಲಿ ಉಳಿಯುವುದಾಗಿ ಹೇಳಿದರು‌ .
ನಾಮಪತ್ರ ಸಲ್ಲಿಸುವ ಮುನ್ನ ಮಾತನಾಡಿದ ನಿರಂಜನ ಸರ್ದೇಸಾಯಿ, ಮರಾಠಿ ಭಾಷಿಕರಿಗೆ ಕರ್ನಾಟಕ ಸರ್ಕಾರ ಅನ್ಯಾಯ ಮಾಡುತ್ತಲೇ ಬಂದಿದೆ. ನಾವು ಕಾರವಾರ, ಬೆಳಗಾವಿ , ನಿಪ್ಪಾಣಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು‌ . ಬೆಳಗಾವಿ ದ್ವಿಭಾಷಾ ಪ್ರದೇಶ ಎಂದು ಘೋಷಿಸಬೇಕು. ಮರಾಠಿ ಶಾಲೆಯಲ್ಲಿ ಕನ್ನಡ ಶಿಕ್ಷಕರ ನೇಮಕ ನಿಲ್ಲಿಸಬೇಕೆಂದು ನಮ್ಮ ಒತ್ತಾಯವಿದೆ. ನಾವು ಸಂಯುಕ್ತ ಮಹಾರಾಷ್ಟ್ರದಲ್ಲಿ ಇರುತ್ತೇವೆ ಇಲ್ಲವೇ ಕಾರಾಗೃಹದಲ್ಲಿ ಇರುತ್ತೇವೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.


ಗಡಿವಿವಾದ ಸುಪ್ರೀಂ ಕೋರ್ಟ್ ನಲ್ಲಿದೆ. ನಮ್ಮ ಹೋರಾಟ ಮುಂದುವರೆಯಲಿದೆ. ನಾವು ಸಂಯುಕ್ತ ಮಹಾರಾಷ್ಟ್ರದ ಸ್ಥಾಪನೆ ಬಯಸುತ್ತೇವೆ ಎಂದರು‌ .


ನಾಮಪತ್ರ ಸಲ್ಲಿಕೆ ಮುನ್ನ ಎಂಇಎಸ್ ನ ಐವತ್ತು ಜನರಿದ್ದ ಗುಂಪು ಕಾರವಾರ ನಗರದಲ್ಲಿ ಮೆರವಣಿಗೆ ಮಾಡಿ ಜೈ ಮಹಾರಾಷ್ಟ್ರ, ಜೈ ಮರಾಠಿ ಘೋಷಣೆ ಕೂಗಿದರು.
…

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button