Mysore

ರೆಬಲ್ ಅಲ್ಲ ಎಂದ ಈಶ್ವರಪ್ಪ

ಮೈಸೂರು: ನಾನು ರೆಬಲ್ ಅಲ್ಲ, ಬದಲಾಗಿ ಲಾಯಲ್ ಎನ್ನುವ ಮೂಲಕ ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದನ್ನು ಸಚಿವ ಕೆ.ಎಸ್. ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ.
ನಾನು ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರವೇ ನನ್ನ ಇಲಾಖೆಯ ಅನುದಾನ ನನ್ನ ಗಮನಕ್ಕೆ ಬೇರೆ ಇಲಾಖೆಗೆ ನೀಡುವಂತೆ ತಿಳಿಸಿದ್ದೆ. ಆದರೂ, ಹಸ್ತಕ್ಷೇಪ ಮಾಡಿ ಅನುದಾನ ಬಿಡುಗಡೆ ಮಾಡಿದ್ದರಿಂದ ಆಕ್ಷೇಪಿಸಿ, ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಯಮಾನುಸಾರ ಅನುದಾನ ಬಿಡುಗಡೆ ಮಾಡಿದ್ದರೇ ನನ್ನ ಆಕ್ಷೇಪವಿರುತ್ತಿರಲಿಲ್ಲ. ಬಜೆಟ್ ನಲ್ಲಿ ಘೋಷಣೆಯಾಗಿರುವಂತೆ ಹಣವನ್ನು ಆರ್ಥಿಕ ಇಲಾಖೆ ಆಯಾ ಇಲಾಖೆಗೆ ಬಿಡುಗಡೆ ಮಾಡಲಿದೆ. ಆದರೆ, ಈ ನಿಯಮವನ್ನು ಮೀರಿ ಸಿಎಂ ಯಡಿಯೂರಪ್ಪ ಅವರು ಮಧ್ಯಪ್ರವೇಶಿಸಿ, ಕಾನೂನು ನಿಯಮ ಉಲ್ಲಂಘಿಸಿ ಅನುದಾನ ಬಿಡುಗಡೆಗೆ ಪತ್ರದ ಮೂಲಕ ತಿಳಿಸಿದ್ದಾರೆ. ಇದನ್ನು ನಾನು ಆಕ್ಷೇಪಿಸಿದ್ದೇನೆ ಎಂದರು.
ಪ್ರಿನ್ಸಿಪಲ್ ಸೆಕ್ರೇಟರಿಗೆ 65 ಕೋಟಿ ಅನುದಾನ ಬಿಡುಗಡೆ ಕುರಿತಂತೆ ಸಿಎಂ ಯಡಿಯೂರಪ್ಪ ತಡೆ ಹಿಡಿಯಲಾಗಿದ್ದ ಅನುದಾನವನ್ನು ಬಿಡುಗಡೆ ಮಾಡುವಂತೆ ಪತ್ರದಲ್ಲಿ ತಿಳಿಸಿದ್ದರು. ನಮ್ಮ ಸೆಕ್ರೇಟರಿ ನನ್ನನ್ನು ಕೇಳಿದಾಗ ನಿಯಮಾನುಸಾರ ಏನ್ ಕ್ರಮ ಕೈಗೊಳ್ಳಬೇಕೋ ಕೈಗೊಳ್ಳಿ ಎಂದೆ. ಅವರು ಸಿಎಂ ತಿಳಿಸಿದ್ದಾರೆ ಎಂದು ಹೇಳಿದ್ದರು. ನಿಯಮಾನುಸಾರವೇ ಬಿಡುಗಡೆ ಮಾಡುವುದಕ್ಕೆ ತಿಳಿದ್ದಾರೆ ಎಂದು ಉತ್ತರಿಸಿದ್ದಾರೆ. ನಾನು ವಿವಿಧ ಅಧಿಕಾರಿಗಳ ಜೊತೆ ಈ ಕುರಿತು ಚರ್ಚಿಸಿದಾಗ ಇದು ತಪ್ಪು ಎನ್ನುವುದು ಮನದಟ್ಟಾಯಿತು ಎಂದು ಈಶ್ವರಪ್ಪ ತಿಳಿಸಿದರು.
ಇಲಾಖೆಯ ಹಣವನ್ನು ಸಂಬAಧಿಸಿದAತೆ ಸಚಿವರ ಗಮನಕ್ಕೆ ಬಾರದಂತೇ, ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಮರಿಸ್ವಾಮಿಗೆ ನಿಯಮ ಬಾಹಿರವಾಗಿ ಬಿಡುಗಡೆಗೆ ಸಿಎಂ ಸೂಚಿಸಿದ್ದಾರೆ. ಇದು ಎಚ್ಟರ ಮಟ್ಟಿಗೆ ಸರಿ ಎಂದು ಈಶ್ವರಪ್ಪ ಪ್ರಶ್ನಿಸಿದರು. ಈ ಹಿನ್ನೆಲೆಯಲ್ಲಿಯೇ ರಾಜ್ಯಪಾಲರಿಗೆ ಪಕ್ಷದ ಉಸ್ತುವಾರಿ ಅರುಣಸಿಂಗ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ಸಮರ್ಥಿಸಿಕೊಂಡರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button