Bidar

ಮತ್ತೆ ಬಿಜೆಪಿ ಸೇರಿದ ಪ್ರಕಾಶ ಖಂಡ್ರೆ

ಮಾಜಿ ಶಾಸಕ ಪ್ರಕಾಶ ಖಂಡ್ರೆ ಮತ್ತೆ ಬಿಜೆಪಿ ಸೇರಿದ್ದಾರೆ.
1999 ಹಾಗೂ 2004 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಕಾಶ ಖಂಡ್ರೆ ಅವರು ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಾ. ವಿಜಯಕುಮಾರ ಖಂಡ್ರೆ, ಎರಡನೇ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಅವರನ್ನು ಪ್ರಕಾಶ ಖಂಡ್ರೆ ಸೋಲಿಸಿದ್ದರು. ನಂತರದ ಎರಡು ವಿಧಾನಸಭೆ ಚುನಾವಣೆಯಲ್ಲಿ ಅವರು ಪರಾಭಗೊಂಡಿದ್ದರು.
2008 ರ ವಿಧಾನಸಭಾ ಚುನಾವಣೆಯಲ್ಲಿ ಪ್ರಕಾಶ ಖಂಡ್ರೆ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಲಾಗಿತ್ತು. ಆದರೆ, ನಂತರ ಪ್ರಕಾಶ ಖಂಡ್ರೆ ಬದಲು ಡಿಕೆ ಸಿದ್ರಾಮ ಅವರಿಗೆ ಟಿಕೆಟ್ ನಿಡಲಾಯಿತು. ಇದರಿಂದ ಅಸಮಾದಾನಗೊಂಡಿದ್ದ ಪ್ರಕಾಶ ಖಂಡ್ರೆಯವರು, ಕೊನೆಗಳಿಗೆಯಲ್ಲಿ ಜೆಡಿಎಸ್ ಸೇರಿ ಸ್ಪರ್ಧಿಸಿದ್ದರು.
2018 ರ ವಿಧಾನಸಭಾ ಚುನಾವಣೆ ನಂತರ ಪ್ರಕಾಶ ಖಂಡ್ರೆ ಅಷ್ಟೇನು ಸಕ್ರಿಯರಾಗಿರಲಿಲ್ಲ. ಆರೋಗ್ಯ ಸಮಸ್ಯೆಯೂ ಅವರನ್ನು ಕಾಡಿತ್ತು. ಇದೀಗ ಚೇತರಿಸಿಕೊಂಡಿರುವ ಪ್ರಕಾಶ ಖಂಡ್ರೆ ಬಿಜೆಪಿ ಸೇರುವ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಕ್ಕೆ ಮುಂದಾಗಿದ್ದಾರೆ.
ಬಸವಕಲ್ಯಾಣದಲ್ಲಿ ಉಪಚುನಾವಣೆ ನಿಮಿತ್ತ ಭಾನುವಾರ ನಡೆದ ಬಿಜೆಪಿ ನಾಯಕರ ಸಭೆಯಲ್ಲಿ ಪ್ರಕಾಶ ಖಂಡ್ರೆ ಬಿಜೆಪಿ ಸೇರಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜು ಬೊಮ್ಮಾಯಿ, ಮುಖ್ಯಮಂತ್ರಿ ಲಕ್ಷ್ಮಣ ಸವದಿ, ವಸತಿ ಸಚಿವರಾದ ವಿ ಸೋಮಣ್ಣ ಮತ್ತಿತರ ಬಿಜೆಪಿ ನಾಯಕರ ಉಪಸ್ಥಿತಿಯಲ್ಲಿ ಪ್ರಕಾಶ ಖಂಡ್ರೆ ಬಿಜೆಪಿ ಸೇರಿದ್ದಾರೆ.
ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಸ್ಪರ್ಧಿಸಿ ಪರಾಭವಗೊಂಡಿರುವ ಬಿಜೆಪಿ ಮುಖಂಡ ಡಿ.ಕೆ. ಸಿದ್ರಾಮ ಅವರಿಗೆ ಪ್ರಕಾಶ ಖಂಡ್ರೆ ಮಗ್ಗಲು ಮುಳ್ಳಾಗಿ ಕಾಡುವ ಸಾಧ್ಯತೆ ಇದೆ. ಡಿಕೆ ಸಿದ್ರಾಮ ಅವರಿಗೆ ಹೋಲಿಸಿದ್ದಲ್ಲಿ ಪ್ರಕಾಶ ಖಂಡ್ರೆ ಉತ್ತಮ ನಾಯಕರು ಎನ್ನುತ್ತಾರೆ, ಭಾಲ್ಕಿ ಕ್ಷೇತ್ರದ ಮತದಾರರು.
ಪ್ರಕಾಶ ಖಂಡ್ರೆ ಅವರ ಬಿಜೆಪಿ ಸೇರ್ಪಡೆಯಿಂದ ಭಾಲ್ಕಿ ರಾಜಕೀಯದಲ್ಲಿ ಹೊಸದೊಂದು ಅಧ್ಯಾಯ ಶುರುವಾಗಲಿದೆ. ಪ್ರಕಾಶ ಖಂಡ್ರೆ ಅವರ ಸೇರ್ಪಡೆಯನ್ನು ಡಿಕೆ ಸಿದ್ರಾಮ ವಿರೋಧಿಸಿದ್ದಾರೆ. ಆದರೆ, ಬಿಜೆಪಿ ನಾಯಕತ್ವ ಇದಕ್ಕೆ ಸೊಪ್ಪು ಹಾಕಿಲ್ಲ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button