Crime

ಸೌಹಾರ್ದ ಕ್ರಿಕೆಟ್: ಟೀಂ ಅಜಾದಿ ಚಾಂಪಿಯನ್ ಹಾಕತ್ತೂರು

ಹಾಕತ್ತೂರು, ಏ.12: ಬದರ್ ಬಾಯ್ಸ್ ಹಾಕತ್ತೂರು ಆಶ್ರಯದಲ್ಲಿ ಕಳೆದ ನಾಲ್ಕು ದಿನಗಳಿಂದ ಹಾಕತ್ತೂರು ಶಾಲಾ ಮೈದಾನದಲ್ಲಿ ನಡೆದ ಸೀಮಿತ ಪಂಚಾಯಿತಿ ವ್ಯಾಪ್ತಿಯ ಒಂಬತ್ತು ತಂಡಗಳ ಸೌಹಾರ್ದ ಕ್ರಿಕೆಟ್ ಪಂದ್ಯಾಟದಲ್ಲಿ ಟೀಂ ಅಜಾದಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಸೋಮವಾರ ನಡೆದ ಫೈನಲ್ ಪಂದ್ಯಾಟದಲ್ಲಿ ರಜಾಕ್ ಮಾಲೀಕತ್ವದ ಟೀಂ ಅಜಾದಿ ತಂಡವು ಹುಸೈನಾರ್ ಮಾಲೀಕತ್ವದ ಕುಟ್ಟಿ ವಾರಿಯರ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

IMG 20210412 WA0146 1 Crime

ಮೂರನೇ ಬಹುಮಾನವನ್ನು ಪೌಂಡ್ ಹಿಟ್ಟರ್ಸ್ ಹಾಗೂ ನಾಲ್ಕನೇ ಬಹುಮಾನವನ್ನು ರೆಡ್ ವಿಂಗ್ಸ್ ತಂಡ ಪಡೆದುಕೊಂಡರು.

ಮೊದಲನೇ ಬಹುಮಾನವಾಗಿ 45 ಸಾವಿರ ನಗದು ಆಕರ್ಷಕ ಟ್ರೋಫಿ, ಎರಡನೇ ಬಹುಮಾನವಾಗಿ 35 ಸಾವಿರ ನಗದು ಆಕರ್ಷಕ ಟ್ರೋಫಿ, ಮೂರನೇ ಬಹುಮಾನವಾಗಿ 10 ಸಾವಿರ ನಗದು ಆಕರ್ಷಕ ಟ್ರೋಫಿ ಮತ್ತು ನಾಲ್ಕನೇ ಬಹುಮಾನವಾಗಿ ಆಕರ್ಷಕ ಟ್ರೋಫಿಯನ್ನ ನೀಡಲಾಯಿತು.

ಕ್ರೀಡಾಕೂಟದ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಮುತ್ತಲಿಬ್, ಬೆಸ್ಟ್ ಬೌಲರ್ ಪೌಂಡ್ ಹಿಟ್ಟರ್ಸ್ ತಂಡದ ನಿಧಿ ಪಡೆದುಕೊಂಡರು. ಬೆಸ್ಟ್ ಬ್ಯಾಟ್ಸ್ಮನ್ ಕೈಚೂರ ರಾಯಲ್ ತಂಡದ ಅಲಿ, ಬೆಸ್ಟ್ ಕ್ಯಾಚರ್ ಬದರ್ ಬಾಯ್ಸ್ ತಂಡದ ಸಂತೋಶ್ ಪಡೆದುಕೊಂಡರು.
ಸಮಾರೋಪದ ಸಮಾರಂಭದಲ್ಲಿ ದಿವಾಕರ್, ಅಬೂಬಕ್ಕರ್, ಮಾಚಯ್ಯ, ಖಾಲಿದ್ ಹಾಜಿ, ಕೃಷ್ಣ, ಸುಕುಮಾರ, ಕಾಸಿಂ ಸೇರಿದಂತೆ ಮತ್ತಿತರರು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button