Bidar

ರಂಜಾನ್ ಮಾರ್ಗಸೂಚಿ ಬಿಡುಗಡೆ ಮಾಡಿದ ಸರಕಾರ

ಕೋವಿಡ್ ಸೋಂಕು ಹರಡುವಿಕೆ ತಡೆಗಟ್ಟಲು ಹಲವು ನಿಯಂತ್ರಣ ಕ್ರಮ ಕೈಗೊಂಡಿರುವ ರಾಜ್ಯ ಸರಕಾರ ಇದೀಗ, ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಉಪವಾಸ ವ್ರತಾಚರಣೆ ಮಂಗಳವಾರದಿAದ ಆರಂಭವಾಗಿದೆ. ಹಬ್ಬದ ಆಚರಣೆಗಳು ಕೋವಿಡ್ ಹರಡಲು ಕಾರಣವಾಗಬಾರದು ಎಂಬ ಮುನ್ನೆಚ್ಚರಿಕೆಯಿಂದ ಸರಕಾರ ಮಾರ್ಗಸೂಚಿ ರೂಪಿಸಿದೆ. ಹೊಸ ಮಾರ್ಗಸೂಚಿಯಂತೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರುವುದಿಲ್ಲ. ಪ್ರಾರ್ಥನೆಗೆ ಐದು ನಿಮಿಷ ಮೊದಲು ಮಸೀದಿ ತೆರೆಯಬೇಕು. ಕಂಟೈನ್‌ಮೆAಟ್ ವಲಯಗಳಲ್ಲಿ ಇರುವ ಮಸೀದಿಗಳನ್ನು ಬಂದ್ ಮಾಡಬೇಕು ಎಂದು ಸರಕಾರ ಸ್ಪಷ್ಟವಾಗಿ ತಿಳಿಸಿದೆ.
ನಮಾಜ್ ಮಾಡುವ ಸಂದರ್ಭದಲ್ಲಿ ಮಾಸ್ಕ್ ಕಡ್ಡಾಯ. ಹಾಗೆಯೇ ಸಾಮಾಜಿಕ ಅಂತರವನ್ನೂ ಕಾಪಾಡಬೇಕು. ಪ್ರತಿದಿನದ ಇಫ್ತಿಯಾರ್ ಕೂಟಕ್ಕೆ ಅವಕಾಶ ಇರುವುದಿಲ್ಲ. ಮನೆಯಲ್ಲಿಯೇ ಇಫ್ತಿಯಾರ್ ಕೂಟ ಆಯೋಜಿಸಬಹುದು.
ಸಾಮೂಹಿಕ ಪ್ರಾರ್ಥನೆ ಇರುವುದಿಲ್ಲ. ಮಸೀದಿಗೆ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ಗೇಟ್ ಇರಬೇಕು. ಪ್ರಾರ್ಥನೆಗೆ ಸ್ವಂತ ಜಮಖಾನಾ ಬಳಸÀಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 60 ವರ್ಷ ಮೇಲ್ಪಟ್ಟವರು, ಗಂರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು ಮನೆಯೊಳಗೇ ಇರುವಂತೆ ನೋಡಿಕೊಳ್ಳಬೇಕು. ಮಸೀದಿಯೊಳಗೆ ಜನ ಒಂದೆಡೆ ಅಧಿಕ ಸಂಖ್ಯೆಯಲ್ಲಿ ಸೇರುವುದನ್ನು ತಪ್ಪಿಸಲು ಪ್ರತಿ 6 ಅಡಿಗೆ ಒಂದರAತೆ ವೃತ್ತಗಳನ್ನು ರಚಿಸಬೇಕು. ಗುರುತಿಸಿದ ಸ್ಥಳದಲ್ಲಿಯೇ ಸರದಿಯಲ್ಲಿ ನಿಲ್ಲಬೇಕು.
ತರಬೇತಿ ಪಡೆದಿರುವ ಸ್ವಯಂ ಸೇವಕರು ಮಸೀದಿ ಪ್ರವೇಶ ದ್ವಾರದಲ್ಲಿ ಉಪಸ್ಥಿತರಿದ್ದು, ಥರ್ಮಲ್ ಸ್ಕಾö್ಯನಿಂಗ್ ಮಾಡಬೇಕು. ಜ್ವರ, ಶೀತ, ಕೆಮ್ಮು, ಗಂಟಲು ನೋವಿನ ಲಕ್ಷಣ ಇರುವವರನ್ನು ಯಾವುದೇ ಕಾರಣಕ್ಕೂ ಮಸೀದಿಯೊಳಗೆ ಬಿಡಬಾರದು. ಈ ರೀತಿಯ ಲಕ್ಷಣಗಳಿರುವ ವ್ಯಕ್ತಿಗೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವಂತೆ ಸೂಚಿಸಬೇಕು.
ಪ್ರವೇಶ ದ್ವಾರದಲ್ಲಿಯೇ ಕೈ ತೊಳೆದುಕೊಳ್ಳುವ ವ್ಯವಸ್ಥೆ ಇರಬೇಕು. ಸೋಪು, ಸ್ಯಾನಿಟೈಸರ್ ಸುಲಭವಾಗಿ ಲಭ್ಯವಾಗುವಂತೆ ಇಡಬೇಕು.
ಮಸೀದಿಯ ಮುತವಲ್ಲಿ ಅಥವಾ ವ್ಯವಸ್ಥಾಪಕರು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸರಕಾರ ಸೂಚಿಸಿದೆ. ಕೋವಿಡ್ ನಿಯಂತ್ರಣಕ್ಕೆ ವಹಿಸಬೇಕಾದ ಮುನ್ನೆಚ್ಚರಿಕೆ ಕುರಿತು ಧ್ವನಿವರ್ಧಕ ಮೂಲಕ ಎಲ್ಲರಿಗೂ ಮಾಹಿತಿ ನೀಡಬೇಕು. ಮಸೀದಿಯೊಳಗಿನ ಸ್ಥಳಕ್ಕೆ ಅನುಗುಣವಾಗಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು. ಯಾವುದೇ ಕಾರಣಕ್ಕೂ ಸಾಮಾಜಿಕ ಅಂತರವನ್ನು ನಿರ್ಲಕ್ಷಿಸಬಾರದು. ಜನ ಒತ್ತೊತ್ತಾಗಿ ಸೇರುವುದನ್ನು ತಪ್ಪಿಸಬೇಕು.
ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಬರುವ ಮುಸ್ಲಿಂ ಬಾಂಧವರು ಅನುಸರಿಬೇಕಾದ ಕ್ರಮಗಳ ಬಗ್ಗೆಯೂ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಪ್ರಾರ್ಥನೆಗೆ ಬರುವ ಪ್ರತಿಯೊಬ್ಬರು ಹಾಸಿಕೊಳ್ಳುವ ವಸ್ತç ಅಥವಾ ಮ್ಯಾಟ್ ತರಬೇಕು. ಮನೆಯಲ್ಲಿಯೇ ಉಪವಾಸ ಕೊನೆಗೊಳಿಸಬೇಕು. ಯಾವುದೇ ಕಾರಣಕ್ಕೂ ತಿನ್ನುವ ವಸ್ತುಗಳನ್ನು, ಆಹಾರ ಪದಾರ್ಥ, ಹಣ್ಣುಗಳನ್ನು ಮಸೀದಿಗೆ ಕೊಂಡೊಯ್ಯಬಾರದು.
ಮಾರ್ಗಸೂಚಿಗಳ ಪಾಲನೆಯನ್ನು ಖಚಿತಪಡಿಸುವ ಜವಾಬ್ದಾರಿ ಆಯಾ ಮಸೀದಿಗಳ ವ್ಯವಸ್ಥಾಪಕ ಸಮಿತಿ ಮೇಲಿರುತ್ತದೆ. ಮಸೀದಿಯೊಳಗೆ ಆರೋಗ್ಯಕರ ವಾತಾವರಣ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಸದಸ್ಯರ ಆರೋಗ್ಯದ ಮೇಲೆ ಪರಿಣಾಮವಾಗದಂತೆ ನಿಗಾ ಇಡಬೇಕು.
ಇನ್ನುಳಿದಂತೆ ಮಾರ್ಗಸೂಚಿಯಲ್ಲಿನ ನಿಯಮಗಳು ಹೀಗಿವೆ.

  • ಕಂಟೈನ್ಮೆAಟ್ ವಲಯಗಳಲ್ಲಿರುವ ಮಸೀದಿಗಳು ಬಂದ್.
  • ಉಳಿದ ಮಸೀದಿಗಳಲ್ಲಿ ಮಾತ್ರ ಅವಕಾಶ
  • ಸಾಮೂಹಿಕ ಪ್ರಾರ್ಥನೆಯಲ್ಲಿ ದೈಹಿಕ ಅಂತರ ಕಡ್ಡಾಯ.
  • ಪ್ರಾರ್ಥನೆಗೆ ಮೊದಲು ಮಾಡುವ ಸ್ವಚ್ಚತೆಗೆ ಪ್ರತ್ಯೇಕ ವ್ಯವಸ್ಥೆ ಇರಬೇಕು.
  • ನಮಾಜ್ ಮಾಡುವ ವೇಳೆ ಒಂದೇ ಕಾರ್ಪೆಟ್ ಬಳಸುವಂತಿಲ್ಲ.
  • ಪ್ರತಿಯೊಬ್ಬರೂ ಪ್ರತ್ಯೇಕ ಕಾರ್ಪೆಟ್ ತರಬೇಕು.
  • ದೈಹಿಕ ಅಂತರ ಪಾಲನೆಗಾಗಿ ಮಸೀದಿ ತೆರೆಯಲು ಮೂರು ನಿರ್ಧಿಷ್ಟ ಸಮಯ ನಿಗದಿ.
  • ಪ್ರಾರ್ಥನೆಗೆ 5 ನಿಮಿಷ ಮೊದಲು ಮಸಿದಿ ತೆರೆಯಲು ಅವಕಾಶ
  • ಪ್ರಾರ್ಥನೆ ವೇಳೆಯೂ ಮಾಸ್ಕ್ ಕಡ್ಡಾಯ.
  • ಉಪವಾಸ ಬಿಡುವಾಗ ಮಸಿದಿಗೆ ಆಹಾರ ತರುವಂತಿಲ್ಲ
  • ಉಪವಾಸವನ್ನು ಮನೆಯಲ್ಲೇ ಬಿಡಬೇಕು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button