
ಧಾರವಾಡ: ಉತ್ತರ ಕರ್ನಾಟಕದ ಏಕೈಕ ಪ್ರಾದೇಶಿಕ ವಿಜ್ಞಾನ ಕೇಂದ್ರವು ಕೊರೊನಾದಿಂದ ಲಕ್ಷಾಂತರ ರೂಪಾಯಿ ಆದಾಯ ಕಳೆದುಕೊಂಡಿದ್ದು, ತೀವ್ರ ನಷ್ಟಕ್ಕೆ ಒಳಗಾಗಿದೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಸ್ಥಾಪಿಸಿಲಾಗಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರ ಸದ್ಯ ಕಷ್ಟದಲ್ಲಿದೆ. ಉತ್ತರ ಕರ್ನಾಟಕದ ಜಿಲ್ಲೆಗಳ ವಿಜ್ಞಾನ ಪಠ್ಯಕ್ಕೆ ಸಂಬAಧಿಸಿದ ಪ್ರಾತ್ಯಕ್ಷಿಕೆ, ತಾರಾಲಯ ವೀಕ್ಷಣೆ ಹಾಗೂ ತ್ರೀಡಿ ತಂತ್ರಜ್ಞಾನದಲ್ಲಿ ಮಕ್ಕಳಿಗೆ ವಿಜ್ಞಾನವನ್ನು ತಿಳಿಸಿಕೊಡುವುದಕ್ಕಾಗಿ ಈ ಕೇಂದ್ರ ಸ್ಥಾಪಿಸಲಾಗಿದೆ. ಕಡಿಮೆ ಪ್ರವೇಶ ಶುಲ್ಕದಡಿಯಲ್ಲಿ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ಇಲ್ಲಿ ಪ್ರವೇಶಕ್ಕೆ ಅವಕಾಶವಿದೆ. ನಿತ್ಯವೂ ಸುಮಾರು 4000 ಸಾವಿರ ರೂಪಾಯಿಯಂತೆ ಪ್ರತಿ ತಿಂಗಳು ಏನಿಲ್ಲವೆಂದರೂ 1 ಲಕ್ಷಕ್ಕೂ ಅಧಿಕ ಆದಾಯ ಬರುತ್ತಿತ್ತು. ಈ ಕೇಂದ್ರ ಆರಂಭವಾದಾಗಿAದ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ, ಕೊರೊನಾದಿಂದಾಗಿ ಕಳೆದ ವರ್ಷದ ಮಾರ್ಚ್ನಿಂದ ಡಿಸೆಂಬರ್ವರೆಗೆ ಈ ಕೇಂದ್ರಬAದ್ ಆಗಿ ಲಕ್ಷಾಂತರ ರೂಪಾಯಿ ಆದಾಯಕ್ಕೆ ಹೊಡೆತ ಬಿದ್ದಿದೆ.
ಈ ವರ್ಷವಾದರೂ ಎಲ್ಲವೂ ಸರಿಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದು ಇನ್ನಷ್ಟು ಕಷ್ಟಕ್ಕೀಡು ಮಾಡಿದೆ.
ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ಞಾನ ಹೊಂದಿರುವ ವಿಜ್ಞಾನ ಪ್ರದರ್ಶಿಕೆಗಳು, ರೂಪಕದ ಮಾದರಿಯ ಪ್ರಾತ್ಯಕ್ಷಿಕೆಗಳು ಹಾಗೂ ವಿಜ್ಞಾನ ಪಠ್ಯದ ಕೆಲ ವಿಷಯಗಳು ತ್ರೀಡಿ ಮಾದರಿಯಲ್ಲಿ ಇಲ್ಲಿ ಲಭ್ಯ ಇವೆ. ಜೊತೆಗೆ ಹೊರಗಡೆ ಯುದ್ಧ ವಿಮಾನ, ಯುದ್ಧ ಬಂಕರ್ ಸಹ ಇರುವ ಕಾರಣಕ್ಕೆ ಉತ್ತರ ಕರ್ನಾಟಕದ ವಿದ್ಯಾರ್ಥಿಗಳ ಪಾಲಿಗೆ ಇದೊಂದು ಪ್ರವಾಸಿ ತಾಣದಂತೆಯೂ ಆಗಿದೆ. ಹೀಗಾಗಿ ವಿವಿಧ ಜಿಲ್ಲೆಗಳಿಂದ ಅನೇಕ ವಿದ್ಯಾರ್ಥಿಗಳು ಬರುತ್ತಲೇ ಇದ್ದರು. ಆದರೆ ಈಗ ಕೊರೊನಾದಿಂದಾಗಿ ಈ ಕೇಂದ್ರದತ್ತ ವಿದ್ಯಾರ್ಥಿಗಳು ತಲೆ ಹಾಕದಂತಾಗಿದೆ.
ಕೊರೊನಾದಿAದ ನಮ್ಮ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ನಷ್ಟ್ಟವಾಗಿದೆ. ಕಳೆದ ವರ್ಷದಲ್ಲೂ ಡಿಸೆಂಬರ್ವರೆಗೆ ಬಂದ್ ಮಾಡಲಾಗಿತ್ತು. ಬಳಿಕ ಜನವರಿಯಲ್ಲಿ ಆರಂಭವಾಗಿ ನಷ್ಟ ಭರಿಸಬಹುದಾಗಿತ್ತು, ಆದರೆ, ಕೋವಿಡ್ ಎರಡನೇ ಅಲೆಯಿಂದ ಮತ್ತೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎನ್ನುತ್ತಾರೆ ಕೇಂದ್ರದ ನಿರ್ದೇಶಕರು ಡಾ. ವಿ.ಡಿ. ಬೋಳಶೆಟ್ಟಿ.
ವಿದ್ಯಾರ್ಥಿಗಳ ಪಾಲಿಗೆ ವಿಜ್ಞಾನ ಕಾಶಿಯಂತಿದ್ದ ವಿಜ್ಞಾನ ಕೇಂದ್ರಕ್ಕೆ ಕೊರೊನಾದ ಕರಿನೆರಳು ಬಿದ್ದಿದ್ದು ಲಕ್ಷಾಂತರ ರೂಪಾಯಿ ಹಾನಿ ಮಾಡಿದೆ, ಅದರಿಂದ ಚೇತರಿಸಿಕೊಂಡು ಪುನಃ ಆರಂಭಗೊಳ್ಳಬೇಕು ಅನ್ನೋವಾಗಲೇ ಕೊರೊನಾ ಮತ್ತೆ ತನ್ನ ಎರಡನೇ ಸ್ವರೂಪ ತೋರುತ್ತಿದೆ.




