ಬಸವಕಲ್ಯಾಣ ಉಪ ಚುನಾವಣೆ: ಮತದಾನಕ್ಕೆ ಅಗತ್ಯ ಸಿದ್ಧತೆ ಬೀದರ
ಬೀದರ ಏಪ್ರೀಲ್ ೧೫ (ಕ.ವಾ):- ೪೭ ಬಸವಕಲ್ಯಾಣ ಉಪ ಚುನಾವಣೆಗಾಗಿ ಏಪ್ರೀಲ್
೧೭ರಂದು ನಡೆಯಲಿರುವ ಮತದಾನಕ್ಕೆ ಜಿಲ್ಲಾಡಳಿತವು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ.
ಹೆಚ್ಚುವರಿ ೬೨ ಸೇರಿದಂತೆ ಒಟ್ಟು ೩೨೬ ಮತಗಟ್ಟೆಗಳಲ್ಲಿ ಏಪ್ರಿಲ್ ೧೭ರಂದು
ಬೆಳಗ್ಗೆ ೭ರಿಂದ ಸಂಜೆ ೭ರವರೆಗೆ ಮತದಾನ ನಡೆಯಲಿದೆ. ೩೨೬
ಮತಗಟ್ಟೆಗಳ ಪೈಕಿ ೯೫ ಸೂಕ್ಷö್ಮ ಮತಗಟ್ಟೆಗಳೆಂದು ಮತ್ತು
೨೩೧ ಮತಗಟ್ಟೆಗಳು ಸಾಮಾನ್ಯ ಮತಗಟ್ಟೆಗಳೆಂದು
ಗುರುತಿಸಲಾಗಿದೆ. ಅಂದು ನಡೆಯುವ ಮತದಾನದಿನದಂದು ೧,೧೪,೭೯೪
ಮಹಿಳಾ ಮತದಾರರು, ೧,೨೪,೯೮೪ ಪುರುಷ ಮತದಾರರು ಮತ್ತು
ಇತರೇ ನಾಲ್ಕು ಜನರು ಸೇರಿ ಒಟ್ಟು ೨,೩೯,೭೮೨ ಮತದಾರರು ಇದ್ದಾರೆ.
೨೬ ಸೇಕ್ಟರ್ ಆಫೀರ್ಸ್ ಒಳಗೊಂಡು, ಮತಗಟ್ಟೆ ಅಧಿಕಾರಿ, ಸಹಾಯಕ
ಮತಗಟ್ಟೆ ಅಧಿಕಾರಿ, ಪೊಲೀಂಗ್ ಆಫೀಸರ್ ಮತ್ತು ಇನ್ನೀತರ ಸೇರಿದಂತೆ
ಚುನಾವಣಾ ಕರ್ತವ್ಯದಲ್ಲಿ ಒಟ್ಟು ೧೫೬೮ ಜನ ಅಧಿಕಾರಿಗಳು ಮತ್ತು ಸಿಬ್ಬಂದಿ
ಭಾಗಿಯಾಗಿದ್ದಾರೆ.
೩೫೪೭ ಯಂಗ್ ಓರ್ಸ್: ಬಸವಕಲ್ಯಾಣ ಉಪ ಚುನಾವಣೆಯಲ್ಲಿ ೨೧೬೩
ಮಹಿಳೆಯರು ಮತ್ತು ೧೩೮೪ ಪುರುಷರು ಸೇರಿ ಒಟ್ಟು ೩೫೪೭ ಯಂಗ್
ಓರ್ಸ್ ತಮ್ಮ ಮತ ಹಕ್ಕನ್ನು ಚಲಾಯಿಸಲಿದ್ದಾರೆ. ಬಸವಕಲ್ಯಾಣ
ಕ್ಷೇತ್ರದಲ್ಲಿ ೧೯೬ ಮಹಿಳೆಯರು, ಮೂವರು ಪುರುಷರು ಸೇರಿ ಒಟ್ಟು
೧೯೯ ಜನ ಸರ್ವೀಸ್ ಓರ್ಸ್ ಇದ್ದಾರೆ.
೪೪ ಬಸ್ಗಳ ವ್ಯವಸ್ಥೆ: ಮತದಾನ ದಿನದಂದು ಮತಗಟ್ಟೆಗಳಲ್ಲಿ
ಕಾರ್ಯನಿರ್ವಹಿಸಲು ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು
ಬಸವಕಲ್ಯಾಣದ ತೇರು ಮೈದಾನದಲ್ಲಿರುವ ಮಸ್ಟರಿಂಗ್ ಕೇಂದ್ರಕ್ಕೆ
ಕರೆದೊಯ್ಯಲು ಬೀದರ ಹಳೆಯ ಬಸ್ ನಿಲ್ದಾಣದಿಂದ ಒಟ್ಟು ೪೪ ಬಸ್ಗಳ
ವ್ಯವಸ್ಥೆ ಮಾಡಲಾಗಿದೆ.
ಮತ ಯಂತ್ರಗಳ ಬಳಕೆ: ಈ ಚುನಾವಣೆಗೆ ೪೫೭ ಸಿಯು ಮತ್ತು ೪೫೭
ಬಿಯು ಮತ್ತು ೪೮೯ ವಿವಿಪ್ಯಾಟ್ ಬಳಸಲಾಗುತ್ತಿದೆ. ಹೆಚ್ಚುವರಿಯಾಗಿ
ಶೇ.೫೦ರಷ್ಟು ವಿವಿಪ್ಯಾಟಗಳನ್ನು, ತಲಾ ಶೇ.೪೦ರಷ್ಟು ಬಿಯು ಮತ್ತು
ಸಿಯುಗಳ ಲಭ್ಯತೆಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
೧೦೦೦ ಜನ ನಿಯೋಜನೆ: ೪೭ ಬಸವಕಲ್ಯಾಣ ಉಪ ಚುನಾವಣೆಗಾಗಿ ೨೦
ಪಿಎಸ್ಐಗಳು, ೫ ಸಿಪಿಐ, ೨ ಡಿಎಸ್ಪಿ, ೫೦ ಹೋಮ್ ಗರ್ಡ÷್ರ್ಸ, ಪ್ಯಾರಾ ಮಿಲಿಟರಿ ಫೋರ್ಸ್, ಡಿಆರ್
ತುಕುಡಿ, ೬ ಕೆಎಸ್ಆರ್ಪಿ ತುಕುಡಿ ಸೇರಿದಂತೆ ಅಂದಾಜು ೧೦೦೦ ಪೊಲೀಸ್
ವ್ಯವಸ್ಥೆಯನ್ನು ನಿಯೋಜನೆ ಮಾಡಲಾಗಿದೆ.
೨೬ ಟೇಬಲ್ ವ್ಯವಸ್ಥೆ: ಬಸವಕಲ್ಯಾಣ ತೇರು ಮೈದಾನದಲ್ಲಿರುವ
ಮಸ್ಟರಿಂಗ್ ಕೇಂದ್ರದಲ್ಲಿ ಒಟ್ಟು ೨೬ ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ.
ಎರಡು ಸಖಿ ಮತಗಟ್ಟೆಗಳು: ಉಪ ಚುನಾವಣೆಯ ಒಟ್ಟು ೩೨೬
ಮತಗಟ್ಟೆಗಳ ಪೈಕಿ ೧೭೨ ಮತಗಟ್ಟೆಗಳಲ್ಲಿ
ವಿಕಲಚೇತನರಿರುವುದನ್ನು ಗುರುತಿಸಿದ್ದು, ಇದಕ್ಕಾಗಿ ಅಗತ್ಯ
ಪ್ರಮಾಣದಲ್ಲಿ ವೀಲ್ ಚೇರ್ಗಳ ವ್ಯವಸ್ಥೆ ಮಾಡಲಾಗಿದೆ. ನಗರದ
ಮತಗಟ್ಟೆ ಸಂಖ್ಯೆ ೯೮ ಮತ್ತು ಗ್ರಾಮೀಣ ಭಾಗದ ಮತಗಟ್ಟೆ
ಸಂಖ್ಯೆ ೫೪ಗಳನ್ನು ಸಖಿ ಮತಗಟ್ಟೆಗಳನ್ನಾಗಿ ಸಿದ್ದಪಡಿಸಲಾಗಿದೆ.
೧೬೩ ಮತಗಟ್ಟೆಗಳಿಗೆ ವೆಬ್ ಕ್ಯಾಸ್ಟಿಂಗ್: ಒಟ್ಟು ೪೦ ಮತಗಟ್ಟೆಗಳಲ್ಲಿ
೫೦ ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ. ೧೬೩
ಮತಗಟ್ಟೆಗಳಿಗೆ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
೧೨ ಅಭ್ಯರ್ಥಿಗಳು ಅಂತಿಮ ಕಣದಲ್ಲಿ: ೪೭ ಬಸವಕಲ್ಯಾಣ ಉಪ ಚುನಾವಣೆಗೆ
ಒಟ್ಟು ೨೪ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಮೂರು
ನಾಮಪತ್ರಗಳು ತಿರಸ್ಕೃತವಾಗಿದ್ದವು. ನಾಮಪತ್ರಗಳನ್ನು
ಸಲ್ಲಿಸಿದ ೧೪ ಅಭ್ಯರ್ಥಿಗಳ ಪೈಕಿ ಇಬ್ಬರು ಅಭ್ಯರ್ಥಿಗಳು
ನಾಮಪತ್ರಗಳನ್ನು ಹಿಂಪಡೆದುಕೊAಡಿದ್ದು ಅಂತಿಮವಾಗಿ ಕಣದಲ್ಲಿ ೧೨
ಜನ ಅಭ್ಯರ್ಥಿಗಳಿದ್ದಾರೆ. ಭಾರತೀಯ ಜನತಾ ಪಾರ್ಟಿ, ಇಂಡಿಯನ್ ನ್ಯಾಷನಲ್
ಕಾಂಗ್ರೆಸ್, ಜನತಾದಳ (ಜಾತ್ಯಾತೀತ), ಕರ್ನಾಟಕ ರಾಷ್ಟç ಸಮಿತಿ, ಶಿವಸೇನಾ,
ಹಿಂದೂಸ್ತಾನ ಜನತಾ ಪಾರ್ಟಿ, ಆಲ್ ಇಂಡಿಯಾ ಮಜಲೀಸ್–ಇ- ಇತಿಹಾದುಲ್ ಮುಸ್ಲಿಮಿನ್,
ಮತ್ತು ಅಖಿಲ ಭಾರತೀಯ ಮುಸ್ಲಿಂ ಲಿಗ್ (ಸೆಕ್ಯೂಲರ್) ಪಕ್ಷಗಳಿಂದ
ಮತ್ತು ಸ್ವತಂತ್ರ ಅಭ್ಯರ್ಥಿಗಳಾಗಿ ನಾಲ್ವರು ಸೇರಿ ಒಟ್ಟು ೧೨
ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
*ಕರ್ನಾಟಕ ವಾರ್ತೆ




