ಬಾಗಲಕೋಟೆ: ಬಾಗಲಕೋಟೆ ನಗರಸಭೆಯ ಪೌರಾಯುಕ್ತರ ಹುದ್ದೆಗಾಗಿನ ಜಟಾಪಟಿ ಮುಂಉವರಿದಿದ್ದು, ರಮೇಶ ಜಾಧವ ಮತ್ತೇ ಪೌರಾಯುಕ್ತರಾಗಿ ಶುಕ್ರವಾರ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ.
ಕೆ.ವಾಸಣ್ಣ ವರ್ಗಾವಣೆಯಿಂದ ಬಾಗಲಕೋಟೆ ನಗರಸಭೆ ಪೌರಾಯುಕ್ತರಾಗಿ ರಮೇಶ ಜಾಧವ ವರ್ಗಾವಣೆಗೊಂಡು ಬಂದಿದ್ದರು. ಆಗ ವಾಸಣ್ಣ ಅದಕ್ಕೆ ತಡೆಯಾಜ್ಞೆ ತಂದು
ಅ.16 ರಂದು ಅಧಿಕಾರ ವಹಿಸಿಕೊಂಡಿದ್ದರು.
ಬಳಿಕ ರಮೇಶ ಜಾಧವ ಅವರು ಕೆಎಟಿ ಆದೇಶಕ್ಕೆ ತಡೆ ಯಾಜ್ಞೆ ಕೋರಿ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು.
ಧಾರವಾಡ ಹೈಕೋರ್ಟ್ ಅ.19 ರಂದು ಕೆಎಟಿ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದು, ಶುಕ್ರವಾರ ನಗರಸಭೆ ಪೌರಾಯುಕ್ತರಾಗಿ ರಮೇಶ ಜಾಧವ ಅವರು ಅಧಿಕಾರದಲ್ಲಿ ಮುಂದುವರೆದಿದ್ದಾರೆ. ಈ ಸಂದರ್ಭದಲ್ಲಿ ಆರ್.ವಾಸಣ್ಣ ಅವರು ಕಚೇರಿಯಲ್ಲಿ ಇರಲಿಲ್ಲ. ರಮೇಶ ಜಾಧವ ಅವರು ಕಚೇರಿಗೆ ಆಗಮಿಸಿ ಅಧಿಕಾರ ವಹಿಸಿಕೊಂಡು ಕಚೇರಿ ಕೆಲಸವನ್ನು ಮುಂದುರಿಸಿದ್ದಾರೆ.
ಪೌರಾಯುಕ್ತರ ಕುರ್ಚಿಗಾಗಿ ನಡೆಯುತ್ತಿರುವ ಗದ್ದಲ ಇಷ್ಟಕ್ಕೆ ನಿಲ್ಲುತ್ತದೋ ಇಲ್ಲವೆ ಮುಂದುವರಿಯುತ್ತದೋ ಎನ್ನುವುದನ್ನು ಕಾಯ್ದುನೋಡಬೇಕಷ್ಟೆ.
ಕೆ. ವಾಸಣ್ಣ ಪೌರಾಯುಕ್ತರಾಗಿ ಮುಂದುವರಿಯುವುದನ್ನು ಪ್ರಶ್ನಿಸಿ ಧಾರವಾಡ ಹೈಕೋಟ್೯ ಮೊರೆ ಹೋಗಿದ್ದೆ. ಹೈಕೋಟ್೯ ವಾಸಣ್ಣ ಮುಂದುವರಿಕೆ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಹಾಗಾಗಿ ನಾನು ಇಂದು ಪೌರಾಯುಕ್ತ ಹುದ್ದೆಯಲ್ಲಿ ಮುಂದುವರಿದಿರುವೆ.
– ರಮೇಶ ಜಾಧವ, ಪೌರಾಯುಕ್ತ ,_ಬಾಗಲಕೋಟೆ ನಗರಸಭೆ.