೩೭,೩೮ನೇ ವಾರ್ಡಿನಲ್ಲಿ ಉಚಿತ ಲಸಿಕಾ ಕಾರ್ಯಕ್ರಮ ಸಾರ್ವಜನಿಕರಿಗೆ ವ್ಯಾಕ್ಸಿನ್ ಮಹತ್ವ ತಿಳಿಸಿದ ಅನೂಪ್ ಕುಮಾರ್

ಬಳ್ಳಾರಿ: ನಗರದ ದೇವಿನಗರದಲ್ಲಿನ ಮೇದರ್ ವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಭಾನುವಾರ ಆರೋಗ್ಯ ಇಲಾಖೆ ಸಹ ಕಾರದೊಂದಿಗೆ ಬಿಜೆಪಿ ಯುವ ಮುಖಂಡರು ಗಳಾದ ೩೮ನೇ ವಾರ್ಡಿನ ವಿ.ಅನೂಪ್ ಕುಮಾರ್, ಮತ್ತು ೩೭ನೇ ವಾರ್ಡಿನ ಭೀಮ ಲಿಂಗ, ಬಿಜೆಪಿ ಯುವ ಮೋರ್ಚಾ ಬಳ್ಳಾರಿ ನಗರ ಘಟಕದ ಅಧ್ಯಕ್ಷರಾದ ಅರುಣ್ ಬಾಲ ಚಂದ್ರ ಅವರ ನೈತೃತ್ವದಲ್ಲಿ ೩೭,೩೮ನೇ ವಾರ್ಡ್ ವ್ಯಾಪ್ತಿಯಲ್ಲಿನ ೧೮ವರ್ಷ ಮೇಲ್ಪಟ್ಟ ಸಾರ್ವಜ ನಿಕರಿಗೆ ಉಚಿತ ಕೋವಿಡ್ ೧೯ ಲಸಿಕಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇದೇ ಸಂದರ್ಭದಲ್ಲಿ ಮಾಜಿ ಸಂಸದ ಸಣ್ಣ ಪಕ್ಕಿರಪ್ಪ ಭೇಟಿ ನೀಡಿ ಅಭಿಯಾನದ ಕುರಿತು ಮಾಹಿತಿ ಪಡೆದು ನಂತರ ಮಾತನಾಡಿದ ಅವರು ಎಲ್ಲಾ ಸಾರ್ವಜನಿಕರು ತಪ್ಪದೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು, ವ್ಯಾಕ್ಸಿನ್ ಹಾಕಿಸಿಕೊಳ್ಳವುದರಿಂದ ಕೋವಿಡ್ ಸಾಂಕ್ರಮಿಕ ರೋಗವನ್ನು ಸುಲಭವಾಗಿ ಹೋಗಲಾಡಿಸಬಹುದು ಎಂದರು.

೩೮ನೇ ವಾರ್ಡ್ನ ಬಿಜೆಪಿ ಯುವ ಮುಖಂಡರಾದ ವಿ.ಅನೂಪ್ ಕುಮಾರ್ ಮಾತನಾಡಿ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಬರುತ್ತಿದೆ ನಗರದ ೩೭,೩೮ ವಾರ್ಡಿನಲ್ಲಿ ನೂರಾರು ಜನರು ಬೆಳಿಗ್ಗೆಯಿಂದ ಬಂದು ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿದ್ದಾರೆ. ವಾರ್ಡಿ ನಲ್ಲಿರುವ ಪ್ರತಿ ಮನೆ ಮನೆಗೆ ಭೇಟಿ ನೀಡಿ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಮನವಿ ಸಹ ಮಾಡಲಾಯಿತು ಎಂದರು.

೩೭ನೇ ವಾರ್ಡಿನ ಬಿಜೆಪಿ ಮಖಂಡರಾದ ಭೀಮಲಿಂಗ ಅವರು ಮಾತನಾಡಿ ಕೋವಿಡ್ ವ್ಯಾಕ್ಸಿನ್ ಎಲ್ಲಾರು ತಪ್ಪದೇ ತಗೆದುಕೊಳ್ಳಬೇಕು ಇದರಿಂದ ಕರೋನಾ ಸೋಂಕು ನಿಯಂತ್ರಿಸಬಹುದು ಎಂದರು.ಸು ಮಾರು ೨೫೦ಕ್ಕೂ ಹೆಚ್ಚಿನ ಜನರು ಈಗಾಗಲೇ ಲಸಿಕೆ ಹಾಕಿಸಿಕೊಂಡಿದ್ದಾರೆ ಜನರ ಪ್ರತಿ ಕ್ರಿಯೆ ಉತ್ತಮವಾಗಿದೆ ಎಂದರು.

ಯುವ ಮೋರ್ಚಾ ನಗರ ಘಟಕ ಅಧ್ಯಕ್ಷರಾದ ಅರುಣ್ ಬಾಲಚಂದ್ರ ಅವರು ಮಾತನಾಡಿ ವ್ಯಾಕ್ಸಿನ್ ಹಾ ಕಿಸಿಕೊಳ್ಳುವುದರಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗು ವುದಿಲ್ಲ ಆದ್ದರಿಂದ ಎಲ್ಲಾರೂ ತಪ್ಪ ದೇ ಲಸಿಕೆ ಹಾಕಿಸಿಕೊಳ್ಳಿ ಎಂದರು
ಈ ಸಂದರ್ಭದಲ್ಲಿ ಬಿಜೆಪಿ ಮುಖಂ ಡರಾದ ರುದ್ರ,ಓಂ ಪ್ರಕಾಶ್, ಉಮೇಶ್, ಸುಧಾಕರ್ ,ನವೀನ್ ಸತೀಶ್, ಸವಿನಂದನ್, ಉಲ್ಲಾಸ್, ಬಿಜೆಪಿ ಮುಖಂಡರಾದ ಚಂದ್ರ, ಯಶ್ವವಂತ ಆನಂದ್, ಉಮೇಶ್, ಇತರರು ಇದ್ದರು.

ಅನೂಪ್ ಕುಮಾರ್‌ರವರಿಂದ ವ್ಯಾಕ್ಸಿನ್ ಜಾಗೃತಿ
ಈ ವೇಳೆ ವಾರ್ಡಿನ ಪ್ರತಿಯೊಬ್ಬರ ಮನೆ ಮನೆಗೆ ತೆರಳಿ ಸಾರ್ವಜನಿಕರಿಗೆ ವ್ಯಾಕ್ಸಿನ್ ಮಹತ್ವ ತಿಳಿಸಿದ ವಿ.ಅನೂಪ್ ಕುಮಾರ್ ಮೂರನೇ ಅಲೆ ತಡೆಯಲು ವ್ಯಾಕ್ಸಿನ್ ಹಾಕಿಸಿಕೊಳ್ಳುವುದೊಂದೇ ಮಾರ್ಗ ಎಂದು ಜಾಗೃತಿ ಮೂಡಿಸಿದರು.

ಗಣ್ಯರಿಗೆ ಗೌರವ ಸನ್ಮಾನ
ಫ್ರಂಟ್‌ಲೈನ್ ವಾರಿಯರ್ಸ್ಗಳಾದ ಡಾ.ಪ್ರಸನ್ನ, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಬೇಬಿ ಲೂದಿಯ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಕಾವ್ಯ, ತಾಂತ್ರಿಕ ನಿರ್ವಾಹಕರಾದ ಸಿಂಧು, ಆಶಾ ಕಾರ್ಯಕರ್ತೆಯರಾದ ಭಾಗ್ಯ, ಹಯತ್, ಜ್ಯೋತಿ, ಶಾಂತಿ ಕುಮಾರಿ, ಶಶಿಕಲಾ ಹಾಗೂ ವಾರ್ಡಿನ ಬೂತ್ ಮಟ್ಟದ ಬಿಜೆಪಿ ಮುಖಂಡರಾದ ಮೋಹನ್,ರಾಜು, ಉಮೇಶ್ ಪಾಲನ್, ಯಶ್ವಂತ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

Latest Indian news

Popular Stories