ಬಾಲಕ ಕಾಣೆ ಬಳ್ಳಾರಿ

ಬಳ್ಳಾರಿ,ಜು.22 (ಕರ್ನಾಟಕ ವಾರ್ತೆ):ಬ್ರೂಸ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 16 ವರ್ಷದ ದುರ್ಗಾಪ್ರಸಾದ್ ಎಂಬ ಬಾಲಕನು ಏ.15 ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೊಲೀಸ್ ಸಬ್‌ಇನ್ಸಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ಬಾಲಕನ ಚಹರೆ ಗುರುತು: 5.3 ಅಡಿ ಎತ್ತರ, ಗೋಧಿ ಮೈಬಣ್ಣ, ದಪ್ಪವಾದ ಮೈಕಟ್ಟು, ದುಂಡು ಮುಖ, ಎರಡು ಕೈಗಳಿಗೆ ಅಮ್ಮ ಅಂತ ಅಚ್ಚೆ ಇರುತ್ತದೆ, ಕನ್ನಡ ಮತ್ತು ತೆಲುಗು ಮಾತಾಡುತ್ತಾನೆ, ಅಂಗಿ ಮತ್ತು ನಿಕ್ಕರ್ ಧರಿಸಿರುತ್ತಾನೆ.
ಈ ಚಹರೆಯುಳ್ಳ ಬಾಲಕನ ಮಾಹಿತಿ ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಿದ್ದಾರೆ.

Latest Indian news

Popular Stories