ಮತದಾನ ಮಾಡಲು ಬಂದ ಮಹಿಳೆಗೆ ಹೃದಯ ಸ್ತಂಭನ

ಬೆಂಗಳೂರು, ಏಪ್ರಿಲ್‌ 26: ರಾಜ್ಯಾದ್ಯಂತ ಲೋಕಸಭಾ ಚುನಾವಣೆ ಮತದಾನ ಭರದಿಂದ ಸಾಗುತ್ತಿದ್ದು, ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಮುಂದುವರಿದದೆ. ಬೆಳಗ್ಗೆ 7 ಗಂಟೆಯಿಂದಲೇ ಮತದಾರರು ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸುತ್ತಿದ್ದು, ಬಿಸಿಲು ಹೆಚ್ಚಾಗುತ್ತಿದ್ದಂತೆ ಮತಗಟ್ಟೆಗಳಲ್ಲಿ ನಿಲ್ಲದಂತಾಗುತ ಬಿಸಿಲಿನ ಝಳ ಹಾಗೂ ಸುಸ್ತಾಗಿ ಮತದಾನ ಮಾಡಲು ಬಂದ ಮಹಿಳೆಗೆ ಹೃದಯ ಸ್ತಂಭನವಾದ ಘಟನೆ ಬೆಂಗಳೂರಿನ ಜೆ.ಪಿ.ನಗರ 8ನೇ ಹಂತದ ಜಂಬೂ ಸವಾರಿ ದಿನ್ನೆಯಲ್ಲಿ ನಡೆದಿದೆ. ಮತಗಟ್ಟೆಗೆ ಬಂದಿದ್ದ ಮಹಿಳೆ ಬಾಯಾರಿದೆ ನೀರು ಕುಡಿಯಲು ಹೋದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ.

ಕೂಡಲೇ ಬೊಮ್ಮಸಂದ್ರದ ನಾರಾಯಣ ಆರೋಗ್ಯ ಕೇಂದ್ರದ ಮೂತ್ರಪಿಂಡ ತಜ್ಞ ಡಾ.ಗಣೇಶ್ ಶ್ರೀನಿವಾಸ ಪ್ರಸಾದ್ ಹೃದಯ ಸ್ತಂಭನದಿಂದ ಕುಸಿದು ಬಿದ್ದ ಮಹಿಳೆಯನ್ನು ಪರೀಕ್ಷಿಸಿದ್ದು, ಚಿಕಿತ್ಸೆ ನೀಡಿ ಪ್ರಾಣವನ್ನು ಉಳಿಸಿದ್ದಾರೆ.

ರಾಜ್ಯದಲ್ಲಿ ಕಳೆಗಟ್ಟಿದ ಲೋಕಸಭಾ ಚುನಾವಣೆ, ಜಾನಪದ ಶೈಲಿಯಲ್ಲಿ ಮತದಾರರ ಸ್ವಾಗತ

ಮಹಿಳೆಯನ್ನು ಪರಿಶೀಲಿಸಿದ ವೈದ್ಯರಿಗೆ ತಕ್ಷಣವೇ ಮಹಿಳೆಯ ನಾಡಿಮಿಡಿತ ಕಡಿಮೆಯಾಗಿರುವುದು ತಿಳಿದು ಬಂದಿಗೆ. ಜೊತೆಗೆ ದೇಹ ಕೂಡ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ತಕ್ಷಣ ಸ್ಥಳದಲ್ಲೇ ಸಿಪಿಆರ್‌ ಮಾಡಿದಿದ್ದರಿಂದ ಮಹಿಳೆ ಪರಿಸ್ಥಿತಿ ಸುಧಾರಿಸಿದೆ. ಚುನಾವಣಾ ಕರ್ತವ್ಯದಲ್ಲಿದ್ದವರು ಮಹಿಳೆಯ ನೆರವಿಗೆ ಡಾ.ಗಣೇಶ್ ಶ್ರೀನಿವಾಸ ಪ್ರಸಾದ್ ಅವರು ಧಾವಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಐದು ನಿಮಿಷದೊಳಗೆ ಆಯಂಬುಲೆನ್ಸ್ ಸ್ಥಳಕ್ಕೆ ಬಂದಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅದೃಷ್ಟವಶಾತ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Latest Indian news

Popular Stories