ಶಿವಮೊಗ್ಗ : ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಶಾಸಕ ಕೆಎಸ್ ಈಶ್ವರಪ್ಪ ಮಾತನಾಡಿದ್ದು, ರಸ್ತೆ, ಚರಂಡಿ, ದೀಪ ಅಳವಡಿಸಲು ಬಿಜೆಪಿ ಆಡಳಿತಕ್ಕೆ ಬರಲ್ಲ ‘ಧರ್ಮ-ದೇಶ’ಕ್ಕಾಗಿ ಬರುತ್ತೆ ಎಂದು ಅವರು ತಿಳಿಸಿದರು.
ಘಟನೆಗೆ ಸಂಬಂಧಿಸಿದಂತೆ ಶರಣಪ್ರಕಾಶ್ ಪಾಟೀಲ್ ಸಿಲ್ಲಿ ಪ್ರಕರಣ ಎಂದು ಹೇಳಿದ್ದಾರೆ ಆದ್ದರಿಂದ ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಶಿವಮೊಗ್ಗದಲ್ಲಿ ಬಿಜೆಪಿಯ ಮಾಜಿ ಶಾಸಕ ಕೆಎಸ್ ಈಶ್ವರಪ್ಪ ಆಗ್ರಹಿಸಿದರು.ಭಯೋತ್ಪಾದಕ ಚಟುವಟಿಕೆ ವಿರುದ್ಧ ಬಿಜೆಪಿ ಇದೆ ಹೊರತು, ರಸ್ತೆ ದೀಪ ಚರಂಡಿ ಮಾಡಲು ಬಿಜೆಪಿ ಆಡಳಿತಕ್ಕೆ ಬರುವುದಿಲ್ಲ. ಧರ್ಮದೇಶ ಉಳಿಸೋಕೆ ಅಧಿಕಾರಕ್ಕೆ ಬರುವುದು ಎಂದು ತಿಳಿಸಿದರು.
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಆರೋಪ ಡಿಕೆ ಶಿವಕುಮಾರ್, ಪ್ರಿಯಾಂಕ್ ಖರ್ಗೆ, ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ ಕೋಗಿಲ್ಲ ಎಂದು ಹೇಳಿದ್ದರು.ಆದರೆ ಎಫ್‌ಎಸ್‌ಎಲ್ ವರದಿಯಲ್ಲಿ ಘೋಷಣೆ ಕೂಗಿರುವುದು ದೃಢವಾಗಿದೆ. ದೇಶದ್ರೋಹಿಗಳಿಗೆ ಬೆಂಬಲ ಕೊಟ್ಟಿದ್ದಕ್ಕಾದರೂ ಕ್ಷಮೆಯಾಚಿಸಬೇಕು.
ಶಿವರಾಮ್ ಹೆಬ್ಬಾರ್ ಎಸ್ ಟಿ ಸೋಮಶೇಖರ್, ಹಣ ಪಡೆದಿದ್ದಾರೆ ಎಂದು ಹೇಳಿಲ್ಲ. ಬಿಜೆಪಿ ಬಿಟ್ಟು ಮತ ಹಾಕಿದ್ದಕ್ಕೆ ಎಷ್ಟು ಕೊಟ್ಟಿರಬಹುದು ಅಂತ ಹೇಳಿದ್ದೇನೆ ಈಶ್ವರಪ್ಪಗೆ ಕ್ಲೀನ್ ಚಿಟ್ ಸಿಕ್ಕಿದೆ ಎಂದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಶಿವಮೊಗ್ಗದಲ್ಲಿ ಬಿಜೆಪಿಯ ಮಾಜಿ ಶಾಸಕ ಕೆಎಸ್ ಈಶ್ವರಪ್ಪ ತಿಳಿಸಿದರು.