ರಾಜ್ಯಾದ್ಯಂತ ಜ.10 ವರೆಗೆ ಭಾರೀ ಮಳೆ ಸಾಧ್ಯತೆ ಹವಾಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು:ಕರ್ನಾಟಕ ರಾಜ್ಯದಲ್ಲಿ ಚಳಿಗಾಲ ಆವರಿಸಿದ್ದರ ಮಧ್ಯೆ ಇದೀಗ ಮಳೆಯು ಆಗುತ್ತಿದೆ. ಹುಬ್ಬಳ್ಳಿ, ಹಾವೇರಿ ಸೇರಿದಂತೆ ರಾಜ್ಯ ಕೆಲವೆಡೆ ಮಳೆ ಸುರಿಯುತ್ತಿದ್ದು, ಇಂದಿನಿಂದ (ಜನವರಿ 7) ನಾಲ್ಕು ದಿನ ರಾಜ್ಯಾದ್ಯಂತ ದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಹೀಗೆ ವ್ಯಾಪಕ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಬದಲಾವಣೆಗಳು ರಾಜ್ಯದಲ್ಲಿ ಮಳೆ ಸುರಿಯುವಿಕೆಗೆ ಕಾರಣವಾಗಿದೆ. ವಿವಿಧ ಜಿಲ್ಲೆಗಳಲ್ಲಿ ಮೂರು ನಾಲ್ಕು ದಿನದಿಂದ ತಾಪಮಾನ ಕಡಿಮೆ ಆಗಿದೆ. ಮಬ್ಬು ವಾತಾವರಣವೇ ಕಂಡು ಬಂರುತ್ತಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆಯ ನಿರೀಕ್ಷೆ ಇದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ವಿಜಯನಗರ, ಮಂಡ್ಯ, ಮೈಸೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಕೊಡುಗ ಸೇರಿದಂತೆ ಈ ಭಾಗದಲ್ಲಿ ಅತ್ಯಧಿಕ ಮಳೆಯಾಗುವ ಸಾಧ್ಯತೆಗಳು ಇವೆ. ಉತ್ತರ ಒಳನಾಡು ಜಿಲ್ಲೆಗಳ ಮುನ್ಸೂಚನೆ ಇದೇ ವೇಳೆ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ, ಗದಗ, ಕೊಪ್ಪಳ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಾಲ್ಕು ದಿನ ಆಗಾಗ ತುಂತುರು ಮಳೆ ಬರಲಿದೆ. ಕೆಲವೊಮ್ಮೆ ಒಂದರೆ ಕಡೆ ಹಗುರ ಮಳೆಯ ದಾಖಲಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿ ತಿಳಿಸಿದೆ.

ಈ 6 ಜಿಲ್ಲೆಗಳೀಗೆ ನಾಳೆ ಶುಕ್ರವಾರ ಭಾರಿ ಮಳೆ, ‘ಯೆಲ್ಲೋ ಅಲರ್ಟ್’ ಘೋಷಣೆ ಇದಕ್ಕೂ ಮೊದಲು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅತ್ಯಧಿಕ ಚಳಿ ವಾತಾವರಣ ಕಂಡು ಬಂದಿತ್ತು. ವಿಜಯಪುರದಲ್ಲಿ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ವರೆಗೆ ಇಳಿಕೆ ಆಗುವ ಮೂಲಕ ಮೈಕೊರೆಯುವ ಚಳಿ ಏರ್ಪಟ್ಟಿತ್ತು. ಇದೀಗ ಚಳಿ ನಡುವೆ ಈ ಭಾಗದಲ್ಲಿ ಆಗಾಗ ಜಿಟಿ ಜಿಟಿ ಮಳೆ ಬರುತ್ತಿದೆ. ಗರಿಷ್ಠ-ಕನಿಷ್ಠ ತಾಪಮಾನ ಮಾಹಿತಿ ಕಳೆದ 24 ಗಂಟೆಯಲ್ಲಿ ಶಿರಾಲಿ, ಕುಟುಟಾ, ಹಾವೇರಿ, ಹುಬ್ಬಳ್ಳಿ ಕಡೆಗಳಲ್ಲಿ ಜೋರು ಮಳೆ ಆಗಿದೆ. ಈ ವೇಳೆ ರಾಜ್ಯದ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಕಾರವಾರದಲ್ಲಿ ದಾಖಲಾಗಿದೆ.

Latest Indian news

Popular Stories