ಆಟವಾಡುತ್ತಿದ್ದಾಗ ದುರಂತ: ಗೇಟ್ ಮುರಿದುಬಿದ್ದು ಬಾಲಕಿ ದುರ್ಮರಣ

ನೆಲಮಂಗಲ: ಮಕ್ಕಳು ಅವರ ಪಾಡಿಗೆ ಆಟವಾಡುತ್ತಿದ್ದಾರೆ ಎಂದು ಪೋಷಕರು ನಿರ್ಲಕ್ಷ ಮಾಡಿದರೆ ಎಂತಹ ಅನಾಹುತಗಳನ್ನು ಮಾಡಿಕೊಳ್ಳುತ್ತಾರೆ ನೋಡಿ. ಗೇಟ್ ಮೇಲೆ ಹತ್ತಿ ಆಟವಾಡುತ್ತಿದ್ದಾಗ ಗೇಟ್ ಮುರಿದು ಬಿದ್ದು ಬಾಲಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ವಾಜರಹಳ್ಳಿಯಲ್ಲಿ ನಡೆದಿದೆ.

7 ವರ್ಷದ ಬಾಲಕಿ ಯಲ್ಲಮ್ಮ ಮೃತಳು. ಮಲ್ಲಪ್ಪ-ಮಲ್ಲಮ್ಮ ದಂಪತಿಯ ಪುತ್ರಿ. ರಾಯಚೂರು ಮೂಲದ ದಂಪತಿ ವಾಜರಹಳ್ಳಿಯಲ್ಲಿ ವಾಸವಾಗಿದ್ದರು.

ಮನೆಯಂಗದಲ್ಲಿದ್ದ ಗೇಟ್ ಮೇಲೆ ಹತ್ತಿ ಮಗಳು ಯಲ್ಲಮ್ಮ ಆಟವಾಡುತ್ತಿದ್ದಳು. ಈ ವೇಳೆ ಗೇಟ್ ಏಕಾಏಕಿ ಮುರಿದಿದ್ದು, ಬಾಲಕಿ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

Latest Indian news

Popular Stories