ಕೋವ್ಯಾಕ್ಸಿನ್ ಎರಡನೇ ಡೋಸ್ ಲಸಿಕೆ ಪಡೆಯಲು ಸೂಚನೆ

ಬೀದರ ಮೇ.27 (ಕರ್ನಾಟಕ ವಾರ್ತೆ): ಬೀದರ ನಗರದ ಎಲ್ಲಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ (ಯುಪಿಹೆಚ್‌ಸಿ ನೌಬಾದ, 100 ಹಾಸಿಗೆ ಆಸ್ಪತ್ರೆ, ಪೊಲೀಸ್ ಹೆಲ್ತ್ ಸೆಂಟರ, ಬಿದ್ರಿ ಕಾಲೋನಿ ಮತ್ತು ಕುಂಬರವಾಡ ಯುಪಿಹೆಚ್‌ಸಿ) ಮತ್ತು ಎಲ್ಲಾ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ (ಭಾಲ್ಕಿ, ಔರಾದ, ಬಸವಕಲ್ಯಾಣ, ಹುಮನಾಬಾದ) ಹಾಗೂ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವ್ಯಾಕ್ಸಿನ್ ಎರಡನೇ ಡೋಸ್ ಲಸಿಕೆ ನೀಡಲಾಗುತ್ತಿದೆ.
ಪ್ರಯುಕ್ತ ಕೋವ್ಯಾಕ್ಸಿನ್ ಮೊದಲನೇ ಡೋಸ್ ಲಸಿಕೆ ಪಡೆದವರು ಆರು ವಾರಗಳು ಪೂರ್ಣಗೊಂಡಿರುವ ಅರ್ಹ ಫಲಾನುಭವಿಗಳು ಎರಡನೇ ಡೋಸ್ ಲಸಿಕೆ ಪಡೆಯಬೇಕೆಂದು ಬೀದರ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories