ಚಿತ್ರದುರ್ಗ: ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮೂರು ದಿನದ ಕಂದಮ್ಮ ಸಾವು-ಆರೋಪ

ಚಿತ್ರದುರ್ಗ, ಮಾರ್ಚ್‌, 08: ವೈದ್ಯರ ನಿರ್ಲಕ್ಷ್ಯದಿಂದ ಹುಟ್ಟಿ ಮೂರು ದಿನದ ಕಂದಮ್ಮ ಅಸುನಿಗಿದ ಘಟನೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಹೀಗೆ ಆರೋಪ ಮಾಡಿ ಮಗುವಿನ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.ಸಾಮಾನ್ಯವಾಗಿ ಬಡವರೇ ಹೆಚ್ಚಾಗಿ ಉಚಿತ ಚಿಕಿತ್ಸೆ ಸಿಗುತ್ತದೆ ಎಂದು ಸರ್ಕಾರಿ ಆಸ್ಪತ್ರೆಗೆ ಕಡೆಗೆ ಮುಖ ಮಾಡುತ್ತಾರೆ.

ಆದರೆ ಇಲ್ಲಿನ ವೈದ್ಯರು ಸೇರಿದಂತೆ ಸಿಬ್ಬಂದಿಯ ಲೆಕ್ಕಾಚಾರವೇ ಬೇರೆ ಆಗಿರುತ್ತದೆ. ಬೇಗ ಚಿಕಿತ್ಸೆ ಬೇಕೆಂದರೆ ಹೆಚ್ಚು ಹಣ ಪಡೆದು ಬಡರೋಗಿಗಳ ಜೇಬಿಗೆ ಕತ್ತರಿ ಹಾಕುವ ಕೆಲಸವನ್ನು ಮಾಡುತ್ತಾರೆ. ಅಷ್ಟೇ ಅಲ್ಲದೆ ಉಚಿತ ಚಿಕಿತ್ಸೆ, ಔಷಧಿ ಇದ್ದರೂ ಹೊರಗಡೆ ‍ಔ‍ಷಧಿಗಳನ್ನು ಬರೆಯುತ್ತಾರೆ ಎನ್ನುವ ಆರೋಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿವೆ. ಇದೀಗ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮೂರು ದಿನದ ಮಗು ಸಾವನ್ನಪ್ಪಿದ್ದು, ಇದಕ್ಕೆ ಕಾರಣ ವೈದ್ಯರ ನಿರ್ಲಕ್ಷ ಎಂದು ಮಗುವಿನ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.ಕಡ್ಲೇಗುದ್ದು ಗ್ರಾಮದ ನಾಗರಾಜ್ ಹಾಗೂ ಕವಿತಾ ಎಂಬುವರ 3 ದಿನದ ಮಗು ಸಾವನ್ನಪ್ಪಿದೆ.

ಚೊಚ್ಚಲ ಹೆರಿಗೆಗೆ ಅಂತಾ ಕವಿತಾ ಅವರು ತವರು ಮನೆಗೆ ಬಂದಿದ್ದರು. ಬಳಿಕ ಹೆರಿಗೆಗೆಂದು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಒಂದು ಕಡೆ ತಾಯಿಗೆ ಸಿಜೇರಿನ್, ಇನ್ನೊಂದೆಡೆ ಮಗು ಸಾವನ್ನಪ್ಪಿದೆ. ಇದರಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.”ಮಗು ಹುಟ್ಟಿ ಮೂರು ದಿನ ಆದ್ರೂ ಯಾವೊಬ್ಬ ವೈದ್ಯರೂ ಚಿಕಿತ್ಸೆ ನೀಡಿಲ್ಲ

ಡ್ಯೂಟಿ ಡಾಕ್ಟರ್, ಮಕ್ಕಳ ಡಾಕ್ಟರ್ ಯಾರೂ ಕೂಡ ಬಂದು ಮಗುವನ್ನು ಪರೀಕ್ಷೆ ಮಾಡಿಲ್ಲ. ನಾರ್ಮಲ್ ಡೆಲಿವರಿ ಆಗುವಂತಿದ್ರೂ ಸಿಜೆರಿನ್ ಮಾಡಿದರು. ನೀರು ಕಡಿಮೆ ಇದೆ ಮಗುವಿನ ಜೀವಕ್ಕೆ ಅಪಾಯ ಎಂದು ಡಾ.ಪವಿತ್ರಾ ಅವರು ನಾಲ್ಕು ಸಾವಿರ ಹಣ ಪಡೆದು ಸಿಜೇರಿನ್ ಮಾಡಿದರು ಅಂತಾ ಆರೋಪ,” ಮಾಡಿ ಕುಟುಂಬಸ್ಥರು ಆಕ್ರೊಶ ಹೊರಹಾಕುತ್ತಿದ್ಧಾರೆ.”ಡಾ.ಕವಿತಾ ಅವರು ಮಧ್ಯವರ್ತಿಯ ಮೂಲಕ 4,000 ರೂಪಾಯಿ ಹಣ ಪಡೆದರು. ಆದರೂ ಕೂಡ ಮಗುವನ್ನು ಉಳಿಸಲು ಆಗಲಿಲ್ಲ.

Latest Indian news

Popular Stories