ಕೀನ್ಯಾ ದೇಶದಿಂದ ಭಾರತಕ್ಕೆ 12 ಟನ್ ಆಹಾರ ಸಾಮಗ್ರಿ ದಾನ

ಕೀನ್ಯಾ ತನ್ನ ಕೋವಿಡ್ -19 ಪರಿಹಾರ ಕಾರ್ಯಗಳ ಭಾಗವಾಗಿ ಭಾರತಕ್ಕೆ 12 ಟನ್ ಆಹಾರ ಉತ್ಪನ್ನಗಳನ್ನು ದಾನ ಮಾಡಿದೆ.
ಕೀನ್ಯಾ ತನ್ನ ದೇಶದಲ್ಲಿ ಉತ್ಪಾದಿಸಿರುವಂತಹ ಕಾಫಿ, ನೆಲಗಡಲೆ ಮತ್ತು ಚಹಾ ಪುಡಿಯನ್ನು ಭಾರತಕ್ಕೆ ಕಳುಹಿಸಿದೆ.

covid 19 relief kenya donates 12 tonnes of food products to india 1 Covid-19
Image ANI

ಭಾರತೀಯ ರೆಡ್ -ಕ್ರಾಸ್ ಸಂಸ್ಥೆಗೆ ಈ ಆಹಾರ ಸಾಮಗ್ರಿಗಳನ್ನು ನೀಡಲಾಗುತ್ತಿದೆ ಮತ್ತು ಇವುಗಳನ್ನು ಮಹಾರಾಷ್ಟ್ರದಲ್ಲಿ ಹಂಚಲಾಗುತ್ತದೆ ಎಂದು ರೆಡ್-ಕ್ರಾಸ್ ತಿಳಿಸಿದೆ.

ಇಂತಹ ಕಷ್ಟದ ಸಮಯದಲ್ಲಿ ನಾವು ಭಾರತ ದೇಶದೊಂದಿಗೆ ಜೊತೆಯಾಗಿ ನಿಂತು ಸಹಕರಿಸಲಿದ್ದೇವೆ ಎಂದು ಕೀನ್ಯಾದ ರಾಯಭಾರಿ ವಿಲ್ಲಿ ಬೆಟ್ ರವರು ತಿಳಿಸಿದ್ದಾರೆ.

ಈ ಆಹಾರ ಸಾಮಗ್ರಿಗಳನ್ನು ವಿಲ್ಲಿ ಬೆಟ್ ರವರು ನೈರೋಬಿಯಿಂದ ದೆಹಲಿಗೆ ಬಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಹಸ್ತಾಂತರಿಸಿದ್ದಾರೆ. ಕೋವಿಡ್ ಕಾಲದಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವವರಿಗೆ ಈ ಆಹಾರ ಸಾಮಗ್ರಿಗಳನ್ನು ನೀಡಬೇಕೆಂದು ಕೀನ್ಯಾ ಮನವಿ ಮಾಡಿದೆ.

Latest Indian news

Popular Stories