ಕೇಂದ್ರದ ಅಸಹಕಾರದ ನಡುವೆಯೂ ಅನ್ನಭಾಗ್ಯ ಯೋಜನೆ ಜಾರಿ- ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಕೇಂದ್ರ ಸರಕಾರದ ಅಸಹಕಾರ ನಡುವೆಯೂ ಅನ್ನಭಾಗ್ಯ ಯೋಜನೆಯಡಿಯಲ್ಲಿ ಬಡವರಿಗೆ ಅಕ್ಕಿ ಕೊಡುವ ಬದಲು ಅಕ್ಕಿ ಖರೀದಿಸಲು ಹಣ ನೇರವಾಗಿ ಅವರ ಖಾತೆಗ ವರ್ಗಾಯಿಸಲಾತ್ತಿದೆ. ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಮುಗುಳುನಾಗಾವಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ರಾಧಾಕೃಷ್ಣ ಅವರ ಪರ ಮತಯಾಚಿಸಿ ಅವರು ಮಾತನಾಡುತ್ತಿದ್ದರು

ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಕೆಲಸ ಕಾಂಗ್ರೆಸ್ ಮಾಡಿದೆ. ಇದನ್ನು ನೀವು ಮರೆಯಬಾರದು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರಲು ಪ್ರಯತ್ನಿಸಬೇಕು. ಆ ಮೂಲಕ ಜನಪರ ಆಡಳಿತ ನಡೆಸುವ ಅವಕಾಶ ನೀಡಿ ಎಂದು ಖರ್ಗೆ ಮನವಿ ಮಾಡಿದರು.

ಭಾವನಾತ್ಮಕವಾಗಿ ಯೋಚಿಸದೆ ಅಭಿವೃದ್ದಿಯ ಆಧಾರದ ಮೇಲೆ ಮತ ನೀಡಿ ಎಂದು ಮನವಿ ಮಾಡಿ ಖರ್ಗೆ ಸಾಹೇಬರ ಕೈಗೊಂಡ ಅಭಿವೃದ್ದಿ ಕೆಲಸಗಳನ್ನು ನೋಡಿ ನಮಗೆ ಮತ ನೀಡಿ ರಾಧಾಕೃಷ್ಣ ಅವರಿಗೆ ಮತ ನೀಡಿ ಎಂದರು.

Latest Indian news

Popular Stories