
ಕಾರವಾರ: ಶಿರಸಿ ಮತ್ತು ಹೆಬಳೆ ಎಂಬಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಶಿರಸಿ ಮಾರಿಕಾಂಬಾ ಕ್ರೀಡಾಂಗಣದ ಬಳಿ ಆನಂದ ತುರೆಮಣಿ ಹನುಮಂತ ವಡ್ಡರ (23), ಭಟ್ಕಳದ ಹೆಬ್ಳೆ ಎಂಬಲ್ಲಿ ಅಬ್ರಾರ್ ಮೊಹದ್ದೀನ್ ಶೇಖ್ (24) ಎಂಬುವವರನ್ನು ಪೊಲೀಸರು ಬಲೆಗೆ ಬೀಳಿಸಿದ್ದಾರೆ.
ಶಿರಸಿ ಮಾರುಕಟ್ಟೆ ಪೊಲೀಸರು 174 ಗ್ರಾಂ ಗಾಂಜಾ ಇಟ್ಟು ಕೊಂಡಿದ್ದ ಆನಂದ ವಡ್ಡರನನ್ನು ಮಾರಿಕಾಂಬಾ ಕ್ರೀಡಾಂಗಣದ ಹತ್ತಿರ ಬಂಧಿಸಿದ್ದಾರೆ. ಗಾಂಜಾ ಬೆಲೆ 10400 ರೂ. ಎನ್ನಲಾಗಿದೆ. ಎಎಸ್ಐ ಬಸವರಾಜ, ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಆನಂದನನ್ನು ಎನ್ ಡಿಪಿ ಎಸ್ ಕಾಯ್ದೆ ಅಡಿ ಬಂಧಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಭಟ್ಕಳದ ಹೆಬ್ಳೆ ಬಳಿ ಹೊಂಡಾ ಸಿಟಿ ಕಾರ್ ನಲ್ಲಿ 84 ಗ್ರಾಂ ಗಾಂಜಾ ಮಾರಾಟ ಮಾಡಲು ಇಟ್ಟುಕೊಂಡ ಆರೋಪದಲ್ಲಿ ಅಬ್ರಾರ್ ಶೇಖ್ ನನ್ನು ಬಂಧಿಸಿದ್ದಾರೆ .5 ಲಕ್ಷದ ಕಾರ್ ಹಾಗೂ 5 ಸಾವಿರ ಬೆಲೆಯ ಗಾಂಜಾ ವಶವಾಗಿದೆ.ಪ್ರಕರಣ ಭಟ್ಕಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ




