ಚೀನಾದಲ್ಲಿ ಎರಡೇ ಮಕ್ಕಳನ್ನು ಹೊಂದಬೇಕೆಂಬ ನಿಯಮ ಸಡಿಲ, ಮೂರು ಮಕ್ಕಳನ್ನು ಹೊಂದಲು ಅವಕಾಶ

ಎರಡೇ ಮಕ್ಕಳನ್ನು ಹೊಂದಬೇಕೆಂಬ ನಿಯಮವನ್ನು ಚೀನಾ ಸಡಿಲಗೊಳ್ಳಿಸಲು ನಿರ್ಧರಿಸಿದೆ. ಯುವಜನರ ಕೊರತೆಯಿಂದ, ಕೆಲಸ ಮಾಡುವ ಜನಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದ ನಂತರ ಚೀನಾ ಈ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದೆ.

ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ, ಕಮ್ಯುನಿಸ್ಟ್ ಪಕ್ಷದ ಪೊಲಿಟ್‌ಬ್ಯುರೊ ಪ್ರಸ್ತುತ ಎರಡು ಮಕ್ಕಳ ನಿರ್ಬಂಧವನ್ನು ಸರಾಗಗೊಳಿಸಲು ನಿರ್ಧರಿಸಿತು, “ಪ್ರತಿ ದಂಪತಿಗಳಿಗೆ ಮೂರು ಮಕ್ಕಳನ್ನು ಹೊಂದಲು ಅವಕಾಶ ನೀಡುವುದರಿಂದ ನಾವು ಎದುರಿಸುತ್ತಿರುವ ಯುವ ಜನಸಂಖ್ಯೆಯ ಸಮಸ್ಯೆ ಸುಧಾರಿಸಲು ಸಹಾಯ ಮಾಡುತ್ತದೆ” ಎಂದು ಕ್ಸಿನ್ಹುವಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಈ ಕ್ರಮವು ಯಾವಾಗ ಜಾರಿಗೆ ಬರಲಿದೆ ಎಂಬುದು ಸ್ಪಷ್ಟವಾಗಿಲ್ಲ, ಆದರೂ ಸಭೆಯು 2025 ರ ಅವಧಿಯಲ್ಲಿ ಜಾರಿಗೆ ತರಬೇಕಾದ ಪ್ರಮುಖ ನೀತಿ ಮತ್ತು ಯೋಜನೆಗಳ ಬಗ್ಗೆ ಚರ್ಚಿಸಿತು.

ದಶಕಗಳಿಂದ ಚೀನಾದಲ್ಲಿ ‘ಒಂದು ದಂಪತಿಗೆ ಒಂದು ಮಗು’ ಎಂಬ ನಿಯಮವಿತ್ತು, ಜನನ ಸಂಖ್ಯೆ ಕಡಿಮೆ ಮತ್ತು ಸಾಕಷ್ಟು ಪ್ರತಿಭಟನೆ ನಂತರ 2016 ರಲ್ಲಿ ‘ಒಂದು ದಂಪತಿಗೆ ಎರಡು ಮಕ್ಕಳು’ ಎಂಬ ನೀತಿ ಜಾರಿಗೆ ಬಂತು.

china Crime
Pic credit: Xinhua

1961 ನಂತರ ಅತ್ಯಂತ ಕಡಿಮೆ ಮಕ್ಕಳು ಜನಿಸಿದ್ದು 2020 ರಲ್ಲಿ ಕೇವಲ 12 ಮಿಲಿಯನ್, ಇದರ ನಂತರ ಜನಸಂಖ್ಯಾ ನೀತಿಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಚೀನಾದ ಸೆಂಟ್ರಲ್ ಬ್ಯಾಂಕ್ ಜನಸಂಖ್ಯಾ ನೀತಿಯನ್ನು ಸಂಪೂರ್ಣವಾಗಿ ಹಿಂತೆಗೆದು ಮಕ್ಕಳನ್ನು ಹೊಂದುವ ಸ್ವತಂತ್ರವನ್ನು ಪೋಷಕರಿಗೆ ನೀಡಬೇಕೆಂದು ಆಗ್ರಹಿಸಿದೆ.

Latest Indian news

Popular Stories