ಪ್ರೀತಿಸಿದವಳ ಮದುವೆ ದಿನ ಯುವಕನ ಮೃತದೇಹ ಪತ್ತೆ – ಪೊಲೀಸರಿಂದ ಪರಿಶೀಲನೆ

ಪ್ರಿಯತಮೇ ಮದುವೆ ದಿನವೇ ಪ್ರಿಯತಮ ಮಸಣ ಸೇರಿದ ಘಟನೆ ಬೀದರ್‌ ನಗರದ ಹೊರವಲಯದ ನೌಬಾದ್ ಹೈವೇ ಬ್ರಿಡ್ಜ್ ಬಳಿ ಜರುಗಿದೆ.

ರೈಲ್ವೆ ಹಳಿ ಮೇಲೆ ತುಂಡರಿಸಿದ್ದ ಬಿದ್ದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದ್ದು,ಬೀದರ್ ತಾಲೂಕಿನ ನಿಜಾಂಪೂರ್ ಗ್ರಾಮದ ವೆಂಕಟೇಶಕುಮಾರ್ (22) ತಿಳಿದು ಬಂದಿದೆ.

ಖಾಸಗಿ ಕಂಪನಿಯೊಂದರಲ್ಲಿ‌ ಕೆಲಸ ಮಾಡುತ್ತಿದ್ದ ವೆಂಕಟೇಶ್ ಎರಡ್ಮೂರು ವರ್ಷಗಳಿಂದ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ,ಯುವತಿಯ ಮದುವೆ ದಿನವೇ ಕೊಲೆ‌ ಮಾಡಿದ್ದಾರೆಂದು ಕುಟುಂಬಸ್ಥರ ಆರೋಪ ಮಾಡಿದ್ದಾರೆ

ಇದು ಆತ್ಮಹತ್ಯೆಯಲ್ಲಾ ಕೊಲೆ ಎಂದು ಮೃತ ಯುವಕನ ಕುಟುಂಬಸ್ಥರ ಆರೋಪ ಮಾಡಿದ್ದು,ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಸ್ಥಳ‌ ಪರಿಶೀಲನೆ ನಡೆಸಿದ್ದಾರೆ.

Latest Indian news

Popular Stories