ರೀಲ್ಸ್ ಮಾಡಲು ಹೋಗಿ 14 ವರ್ಷದ ಬಾಲಕ ಚಲಿಸುವ ರೈಲಿಗೆ ಸಿಲುಕಿ ಮೃತ್ಯು

ಉತ್ತರಪ್ರದೇಶ:ರೀಲ್ಸ್ ಮಾಡಲು ಹೋಗಿ 14 ವರ್ಷದ ಬಾಲಕ ರೈಲ್ಪ್ರಾ ನಡಿ ಸಿಲುಕಿ ಪ್ರಾಣ ಕಳೆದು ಕೊಂಡಿದ್ದಾನೆ.ಇನ್ಸ್ಟಾಗ್ರಾಮ್, ಯೂಟ್ಯೂಬ್‌, ಟೆಲಿಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೀಡಿಯೋ ವೈರಲ್ ಆಗಬೇಕೆಂದು ಬಯಸುವ ಯುವಕರು ಪ್ರಾಣಾಪಾಯವನ್ನು ಲೆಕ್ಕಿಸದೇ ಸಾಹಸ ಮಾಡಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಾರೆ.

ಉತ್ತರಪ್ರದೇಶದ ಬರಬಂಕಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಬಾಲಕನ ಸಾವಿನ ಕೊನೆಕ್ಷಣ ಕ್ಯಾಮರಾದಲ್ಲಿ ಸೆರೆ ಆಗಿದೆ. ಮೃತ ಬಾಲಕನ್ನು 14 ವರ್ಷದ ಫರ್ಮಾನ್ ಎಂದು ಗುರುತಿಸಲಾಗಿದೆ. ಈತ ತನ್ನ ರೀಲ್ಸ್‌ ಹಿನ್ನೆಲೆಯಲ್ಲಿ ಚಲಿಸುವ ರೈಲು ಕಾಣಿಸಬೇಕು ಎನ್ನುವ ದೃಷ್ಟಿಯಿಂದ ಟ್ರ್ಯಾಕ್ ಪಕ್ಕದಲ್ಲಿ ನಿಂತು ರೀಲ್ಸ್ ಮಾಡುವಾಗ ಈ ಆಘಾತಕಾರಿ ಘಟನೆ ಸಂಭವಿಸಿದೆ. ಟ್ರಾಕ್‌ಗೆ ಅತೀ ಸಮೀಪದಲ್ಲಿದ್ದ ಈತನನ್ನು ರೈಲು ಗುದ್ದಿಕೊಂಡು ಹೋಗಿದ್ದು, ಬಾಲಕ ಸಾವನ್ನಪ್ಪಿದ್ದಾನೆ.

ರೈಲು ಗುದ್ದಿ ಗಂಭೀರ ಗಾಯಗೊಂಡ ಬಾಲಕನನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಆಸ್ಪತ್ರೆಗೆ ಬರುವ ವೇಳೆಯೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಅಪಾಯವನ್ನು ಕಡೆಗಣಿಸಿ ಸಾಹಸ ಮಾಡಲು ಮುಂದಾದ ಬಾಲಕನ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ.

Latest Indian news

Popular Stories