ಸೇನೆಗೆ 112 ವೈದ್ಯಕೀಯ ಪದವೀಧರರ ನಿಯೋಜನೆ: ರಕ್ಷಣಾ ಸಚಿವಾಲಯ

ನವದೆಹಲಿ: ‘ಪುಣೆಯ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಲ್ಲಿ (ಎಎಫ್‌ಎಂಸಿ) ತೇರ್ಗಡೆ ಹೊಂದಿದ 58ನೇ ಬ್ಯಾಚ್‌ನ ಒಟ್ಟು 112 ಪದವೀಧರರನ್ನು ಸೇನೆಗೆ ನಿಯೋಜಿಸಲಾಗಿದೆ’ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ಗುರುವಾರ ತಿಳಿಸಿದೆ.

ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗೆ (ಎಎಫ್‌ಎಂಎಸ್‌) ನಿಯೋಜನೆಗೊಂಡ 112 ಪದವೀಧರರ ಪೈಕಿ 87 ಮಂದಿ ಪುರುಷ ಕೆಡೆಟ್‌ಗಳಿದ್ದರೆ, 25 ಮಂದಿ ಮಹಿಳಾ ಕೆಡೆಟ್‌ಗಳಿದ್ದಾರೆ.

ಎಎಫ್‌ಎಂಸಿಯ ಕೀರ್ತಿ ಚಕ್ರ ಪುರಸ್ಕೃತ ಕ್ಯಾಪ್ಟನ್‌ ದೇವಶೀಶ್‌ ಶರ್ಮಾ ಪರೇಡ್‌ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ 81 ವೈದ್ಯರನ್ನು ಭೂಸೇನೆಗೆ, 10‌ ವೈದ್ಯರನ್ನು ನೌಕಾಸೇನೆಗೆ ಹಾ‌ಗೂ 14 ವೈದ್ಯರನ್ನು ವಾಯುಸೇನೆಗೆ ನೇಮಕ ಮಾಡಲಾಗಿದೆ’ ಎಂದು ಅದು ಹೇಳಿದೆ.

ಎಎಫ್‌ಎಂಎಸ್‌ ಮಹಾನಿರ್ದೇಶಕ ಲೆಫ್ಟಿನೆಂಟ್‌ ಜನರಲ್‌ ದಲ್ಜಿತ್‌ ಸಿಂಗ್‌ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Latest Indian news

Popular Stories