ಮರು ಮದುವೆಗೆ ಮಗು ಅಡ್ಡಿಯಾಗಬಹುದೆಂದು ಹದಿನಾಲ್ಕು ತಿಂಗಳ ಮಗು ಕೊಂದ ಕಿರಾತಕ!

ರಾಯಚೂರು: ಮರುವಿವಾಹಕ್ಕೆ ಮಗು ಅಡ್ಡಿಯಾಗುತ್ತದೆ ಎಂದು ಭಾವಿಸಿ ವ್ಯಕ್ತಿಯೊಬ್ಬ ತನ್ನ 14 ತಿಂಗಳ ಮಗುವನ್ನು ಕೊಂದಿರುವ ಘಟನೆ ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಆ ವ್ಯಕ್ತಿ ತಾನು ಮಾಡಿದ ಅಪರಾಧವನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ಆರೋಪಿಯನ್ನು ಲಿಂಗಸೂಗೂರು ತಾಲೂಕಿನ ಕನಸಾವಿ ಗ್ರಾಮದ ನಿವಾಸಿ 32 ವರ್ಷದ ಮಹಾಂತೇಶ್ ಎಂದು ಗುರುತಿಸಲಾಗಿದೆ. ಮೃತ ಮಗುವನ್ನು ಅಭಿನವ ಎಂದು ಗುರುತಿಸಲಾಗಿದೆ.

ಆರೋಪಿ ತನ್ನ ಪತ್ನಿ ಬೇರೆ ಸಂಬಂಧ ಹೊಂದಿರುವ ಕಾರಣ ಎರಡನೇ ಮದುವೆಯಾಗಲು ಬಯಸಿದ್ದ. ಆದರೆ, ಮೊದಲ ಪತ್ನಿಯ ಮಗುವಿನಿಂದ ಅಡ್ಡಿಯಾಗಲಿದೆ ಎಂದು ಭಾವಿಸಿದ್ದ.

ಮಗುವನ್ನು ಕೊಂದು ಶವವನ್ನು ಗ್ರಾಮದ ಸಣ್ಣ ಬಂಡೆಗಳ ಕೆಳಗೆ ಬಚ್ಚಿಟ್ಟಿದ್ದ. ನಾಪತ್ತೆ ಪ್ರಕರಣ ದಾಖಲಾದ ನಂತರ ಪೊಲೀಸರು ಮಹಾಂತೇಶನನ್ನು ಶಂಕಿಸಿ ವಿಚಾರಣೆ ನಡೆಸಿದ್ದಾರೆ. ಮೊದಲು ಶವವನ್ನು ಸುಟ್ಟಿದ್ದೇನೆ ಎಂದು ಸಮರ್ಥಿಸಿಕೊಂಡ ಆತ, ಮೂರು ದಿನಗಳ ನಂತರ ಮಗುವಿನ ಶವವನ್ನು ಬಚ್ಚಿಟ್ಟ ಸ್ಥಳವನ್ನು ತೋರಿಸಿದ್ದಾನೆ.

ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮುದಗಲ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Latest Indian news

Popular Stories