CrimeFeatured StoryUdupi

ಮಲ್ಪೆ: ಗಾಂಜಾ ವಶ – NDPS ಪ್ರಕರಣ ದಾಖಲು

ಮಲ್ಪೆ: ಹೂಡೆ-ಬೆಂಗ್ರೆ ರಸ್ತೆಯಲ್ಲಿ ಗಾಂಜಾ ವಶಪಡಿಸಿಕೊಂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅನೀಲ್‌ ಕುಮಾರ್‌.ಡಿ ಉಪನಿರೀಕ್ಷಕರು, ಮಲ್ಪೆ ಠಾಣೆ ಇವರು ದಿನಾಂಕ: 28/03/2026 ಠಾಣಾ ಅ.ಕ್ರ 37/2026 ಕಲಂ.281 BNS ಪ್ರಕರಣದಲ್ಲಿ ಪಂಚಾಯತುದಾರರೊಂದಿಗೆ ಸ್ಥಳ ಮಹಜರಿನ ಪ್ರಕ್ರಿಯೆ ನಡೆಸುವಾಗ ಅಪಘಾತದಲ್ಲಿ ಒಳಗೊಂಡ KA20MB7666 ನೇ ಹುಂಡೈ ಕ್ರೆಟ್ಟಾ ಕಾರಿನ ಒಳಗೆ ಮಾದಕ ವಸ್ತು ಗಾಂಜಾ ಇರುವುದು ಕಂಡು ಬಂದಿದೆ.

ಈ ಬಗ್ಗೆ ದೃಢಪಡಿಸಿಕೊಂಡು, ಹೂಡೆ ಕೋಡಿಬೇಂಗ್ರೆ ರಸ್ತೆಯಲ್ಲಿರುವ ಶ್ರೀ ನಾಗಬ್ರಹ್ಮ ಬೊಬ್ಬರ್ಯ ದೈವಸ್ಥಾನದ ಬಳಿ ತಲುಪಿ, ಪಂಚರ ಸಮಕ್ಷಮ ಪರಿಶೀಲಿಸಿದಾಗ ಕಾರಿನಲ್ಲಿ ಗಾಂಜಾ ದಂತೆ ಇರುವ ಸ್ವತ್ತು ಒಟ್ಟು ತೂಕ 173.42 ಗ್ರಾಮ್‌ ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ ರೂಪಾಯಿ 8000/- ಆಗಬಹುದು.

ಕಾರಿನಲ್ಲಿ ದೊರೆತ ಸ್ಯಾಮ್‌ಸಂಗ್‌  ಕಂಪೆನಿಯ ಮೊಬೈಲ್‌ ಅಂದಾಜು ಮೌಲ್ಯ ರೂಪಾಯಿ 6,000/-, ಮತ್ತು ನೀಲಿ ಬಣ್ಣದ ಹೋನರ್‌ ಮೊಬೈಲ್‌ ಅಂದಾಜು ಮೌಲ್ಯ ರೂಪಾಯಿ 5,000/-  ರೂ ಆಗಬಹುದು ಸದ್ರಿ ಸ್ವತ್ತುಗಳನ್ನು ಮುಂದಿನ ಕ್ರಮದ ಬಗ್ಗೆ ಸ್ಥಳದಲ್ಲಿ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿ ಮೊಹಮ್ಮದ್‌ ಫೈಜಲ್‌ ಮತ್ತು ಇನ್ನೊರ್ವ ಆರೋಪಿಯು ಅಕ್ರಮವಾಗಿ ಮಾದಕ ವಸ್ತು ಗಾಂಜಾ ಇಟ್ಟುಕೊಂಡು ಮಾರಾಟ ಮಾಡಲು ಕಾಯುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 38/2026 ಕಳಂ: 8(a)(c)‌,20(b)(ii)a&b NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ

Back to top button