CrimeUttara Kannada

ಕಾಲೇಜಿನಿಂದ ಅಪ್ರಾಪ್ತ ವಿದ್ಯಾರ್ಥಿಗಳು ಕಾಣೆ – ಪತ್ತೆಗಾಗಿ ಮನವಿ

 

ಕಾರವಾರ : ಪೂನಮ್ ಜಿತೇಂದ್ರ ವೈಷ್ಣವ್ (16 ವರ್ಷ) ಮತ್ತು ಸಾಗರ ಬಿಷನುಪದ ಪೋರಿಯಾ (17 ವರ್ಷ) ಇವರಿಬ್ಬರು ಕಾರವಾರದ ಪ್ರೀಮಿಯರ್ ಸೈನ್ಸ್ ಆಂಡ್ ಕಾಮರ್ಸ್ ಪಿ.ಯು ಕಾಲೇಜ್ ನಂದನಗದ್ದಾ ದಿಂದ ಕಾಣೆಯಾಗಿದ್ದಾರೆ.

ಕಾರವಾರ ಬಾಡ ಗ್ರಾಮ ನಂದನಗದ್ದ ಪ್ರದೇಶದಲ್ಲಿ ಇರುವ ಖಾಸಗಿ ಪ್ರಿಮಿಯರ್ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ಕಾಮರ್ಸ್ ಓದುತ್ತಿದ್ದು, ಜೂನ್ 24 ರಂದು ಕಾಲೇಜಿನಿಂದ ಕಾಣೆಯಾಗಿರುತ್ತಾರೆ.

ಪೂನಮ್ ಜಿತೇಂದ್ರ ವೈಷ್ಣವ್ ಚಹರೆ:
ವಿದ್ಯಾರ್ಥಿನಿ ಪೂನಮ್ ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು, 5.6 ಅಡಿ ಎತ್ತರ, ಹಿಂದಿ, ರಾಜಸ್ತಾನಿ, ಕೊಂಕಣಿ, ಇಂಗ್ಲೀಷ್ ಮಾತನಾಡುತ್ತಾಳೆ. ಬಿಳಿ ಬಣ್ಣದ ಚೂಡಿದಾರ ಟಾಪ್ ಮತ್ತು ಬ್ಲೂ ಜೀನ್ಸ್ ಪ್ಯಾಂಟ್ ಧರಸಿರುತ್ತಾಳೆ.

ಸಾಗರ ಬಿಷನುಪದ ಬಾಲಕನ ಚಹರೆ:

ವಿದ್ಯಾರ್ಥಿ ಸಾಗರ ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, 5.5 ಅಡಿ ಎತ್ತರ, ಹಿಂದಿ, ಬಂಗಾಲಿ, ಕೊಂಕಣಿ, ಇಂಗ್ಲೀಷ್ ಮಾತನಾಡುತ್ತಾನೆ, ಬೂದು ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಸಿರುತ್ತಾನೆ.

ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಕಾರವಾರ ಪಿ.ಐ. ಮಹಿಳಾ ಠಾಣೆ ಮೊ.ಸಂ:8277987514, ಪಿಎಸೈ ಮಹಿಳಾ ಠಾಣೆ 8277987555 ಅಥವಾ ಕಾರವಾರ ಕಂಟ್ರೋಲ್ ರೂಮ್ ಸಂ:9480805200 ನ್ನು ಸಂಪರ್ಕಿಸುವಂತೆ ಮಹಿಳಾ ಪೊಲೀಸ್ ಠಾಣೆ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Back to top button