ದ.ಕ | ಒಂಬತ್ತು ತಿಂಗಳ ಮಗುವಿನೊಂದಿಗೆ ತಾಯಿ ನಾಪತ್ತೆ:ಪ್ರಕರಣ ದಾಖಲು

ಧರ್ಮಸ್ಥಳ: ಇಲ್ಲಿನ   ಕಳೆಂಜ ಗ್ರಾಮದ ಕಾರ್ಯತ್ತಡ್ಕದಲ್ಲಿ ತಾಯಿ ಪುಟ್ಟ ಮಗುವಿನೊಂದಿಗೆ  ನಾಪತ್ತೆಯಾದ ಘಟನೆ ಮಾ.23ರಂದು ವರದಿಯಾಗಿದೆ.

ಕಳೆಂಜ ಗ್ರಾಮದ ಕಾರ್ಯತ್ತಡ್ಕ ನಿವಾಸಿ ವೆಂಕಪ್ಪ ಗೌಡ ಅವರ ಪತ್ನಿ ಜಯಶ್ರೀ (29ವ) ಹಾಗೂ ಅವರ ಪುತ್ರಿ ರುಷಿಕಾ (9 ತಿಂಗಳು) ನಾಪತ್ತೆಯಾದವರು.

ಮಾ.22ರಂದು ಶ್ರೀಮತಿ ಜಯಶ್ರೀ ಮನೆಯ ರೂಮಿನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಮಲಗಿದ್ದು, ವೆಂಕಪ್ಪ ಗೌಡ ಅವರು ಮನೆಯ ಹಾಲ್ ನಲ್ಲಿ ಮಲಗಿದ್ದರು.  

ಮರುದಿನ ಮಾ. 23 ರಂದು ಬೆಳಿಗೆ, 7:30ಕ್ಕೆ ವೆಂಕಪ್ಪ ಗೌಡರು ಎದ್ದು ನೋಡಿದಾಗ ಮನೆಯಲ್ಲಿ ಪತ್ನಿ ಹಾಗೂ 9 ತಿಂಗಳ ಮಗು ಮನೆಯಿಂದ ನಾಪತ್ತೆಯಾಗಿದ್ದರೆನ್ನಲಾಗಿದೆ. ಈ ಬಗ್ಗೆ  ಧರ್ಮಸ್ಥಳ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 20/2024ರಂತೆ ಪ್ರಕರಣ ದಾಖಲಾಗಿದೆ.

Latest Indian news

Popular Stories