ಚುನಾವಣಾ ಆಯುಕ್ತರಾಗಿ ಸುಶೀಲಚಂದ್ರ

ನವದೆಹಲಿ: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿ ಸುಶೀಲ್ ಚಂದ್ರ ಅವರು ನೇಮಕಕೊಂಡಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ಜಾವಡೇಕರ್ ತಿಳಿಸಿದ್ದಾರೆ.
ಪ್ರಸ್ತುತ ಚುನಾವಣಾ ಮುಖ್ಯ ಆಯುಕ್ತರಾಗಿರುವ ಸುನಿಲ್ ಅರೋರಾ ಅವರ ಅಧಿಕಾರದ ಅವಧಿ ನಿನ್ನೆಗೆ ಮುಕ್ತಾಯಗೊಂಡಿದ್ದು, ಇವತ್ತಿನಿಂದಲೇ ಸುಶೀಲ್ ಚಂದ್ರ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಜಾವಡೇಕರ್ ಹೇಳಿದ್ದಾರೆ.
ಸುಶೀಲ್ ಚಂದ್ರ ಅವರು, 2019 ರಲ್ಲಿ ಚುನಾವಣಾ ಆಯುಕ್ತರಾಗಿ ನೇಮಕೊಂಡಿದ್ದರು. ಇದೀಗ ಮುಖ್ಯ ಆಯುಕ್ತರಾಗಿ ಬಡ್ತಿ ಪಡೆಯುತ್ತಿದ್ದಾರೆ. ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿ ಮೇ.14 2022ರ ವರೆಗೆ ಕಾರ್ಯನಿರ್ವಹಿಸಲಿದ್ದಾರೆ.
ಸುಶೀಲ್ ಚಂದ್ರ ಅವರ ಅಧಿಕಾರಾವಧಿಯಲ್ಲಿ ಉತ್ತರ ಪ್ರದೇಶ ಪಂಜಾಬ್, ಗೋವಾ, ಉತ್ತರಾಖಂಡ ಹಾಗೂ ಮಣಿಪುರ ವಿಧಾನ ಸಭೆಯ ಚುನಾವಣೆಗಳು ನಡೆಯಲಿವೆ.
ಸೆಂಟ್ರಲ್ ಬೋರ್ಡ್ ಆಫರ್ ಡೈರೆಕ್ಟ್ ಟ್ಯಾಕ್ಸ್ ನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಸುಶೀಲ್ ಚಂದ್ರ ಇದೀಗ ಚುನಾವಣಾ ಮುಖ್ಯ ಆಯುಕ್ತರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

Latest Indian news

Popular Stories