
ಉಡುಪಿ: ಮಹಿಳೆ ನಾಪತ್ತೆ
ಉಡುಪಿ ಸೆಪ್ಟಂಬರ್ 01 : ಬೈಂದೂರು ತಾಲೂಕು ಶಿರೂರು ಗ್ರಾಮದ ಬುಕಾರಿ ಕಾಲೋನಿ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಬೀಬಿ ರಿಹಾನ (33) ಎಂಬ ಮಹಿಳೆಯು ಸೆಪ್ಟೆಂಬರ್ 9 ರಂದು ಕೆಲಸದ ನಿಮಿತ್ತ 2 ದಿನಗಳವರೆಗೆ ಹೊರಗೆ ಹೋಗುತ್ತೇನೆಂದು ಹೇಳಿ ಹೋದವರು ಇದುವರೆಗೂ ಮನೆಗೆ ವಾಪಸು ಬಾರದೆ ನಾಪತ್ತೆಯಾಗಿರುತ್ತಾರೆ.
5 ಅಡಿ 4 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ದಪ್ಪನೆಯ ಶರೀರ ಹೊಂದಿದ್ದು, ಕನ್ನಡ, ಹಿಂದಿ ಹಾಗೂ ಉರ್ದು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬೈಂದೂರು ಪೊಲೀಸ್ ಠಾಣೆ ದೂ.ಸಂಖ್ಯೆ: 08254-251033, 9480805459, ಬೈಂದೂರು ವೃತ್ತ ನಿರೀಕ್ಷಕರ ಕಛೇರಿ ದೂ.ಸಂಖ್ಯೆ: 08254-251031, 9480805434 ಹಾಗೂ ಕಂಟ್ರೋಲ್ ರೂಂ ದೂ.ಸಂಖ್ಯೆ: 100 (0820) 2526444 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೈಂದೂರು ಪೊಲೀಸ್ ಠಾಣಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.
ಯುವತಿ ನಾಪತ್ತೆ
ಉಡುಪಿ ಸೆಪ್ಟಂಬರ್ 01 : ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಈಶ್ವರಿ (18) ಎಂಬ ಯುವತಿಯು ಮಂಗಳೂರಿನ ಕೂಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಈ ವಿಷಯ ತಿಳಿದ ಆಕೆಯ ಪೋಷಕರು ಕೂಳೂರಿನಿಂದ ಕುಕ್ಕಿಕಟ್ಟೆಗೆ ಕರೆದುಕೊಂಡು ಬಂದಿರುತ್ತಾರೆ. ಯುವತಿಯು ಹೆಚ್ಚಾಗಿ ಮೊಬೈಲ್ ಫೋನ್ ಬಳಕೆಮಾಡುತ್ತಿದ್ದರಿಂದ ಊರಿನಲ್ಲಿ ಬಿಟ್ಟರೆ ಸರಿಯಾಗಬಹುದೆಂದು ತಿಳಿದು ಪೋಷಕರು ಆಕೆಯೊಂದಿಗೆ ಆಗಸ್ಟ್ 25 ರಂದು ಕುಕ್ಕಿಕಟ್ಟೆಯಿಂದ ಹೊರಟು ಕುಂದಾಪುರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ರಾತ್ರಿ 10.30 ರ ಸುಮಾರಿಗೆ ಬಂದಿದ್ದು, ಯುವತಿಯು ವಾಶ್ ರೂಂ ಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.
ಯುವತಿಯು 4 ಅಡಿ 5 ಇಂಚು ಎತ್ತರ ಇದ್ದು, ಕನ್ನಡ, ತುಳು, ಹಿಂದಿ, ಇಂಗ್ಲೀಷ್ ಹಾಗೂ ತಮಿಳು ಭಾಷೆ ಮಾತನಾಡುತ್ತಾರೆ. ಯುವತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಕುಂದಾಪುರ ಪೊಲೀಸ್ ಠಾಣೆ ದೂ.ಸಂಖ್ಯೆ: 08254-230338, ಕುಂದಾಪುರ ವಿಭಾಗ ಡಿ.ವೈ.ಎಸ್.ಪಿ ಮೊ.ನಂ: 9480805422, ಕುಂದಾಪುರ ಠಾಣೆಯ ಪಿ.ಐ ಮೊ.ನಂ: 9480805455, ಪಿ.ಎಸ್.ಐ ಮೊ.ನಂ: 8277988957 ಹಾಗೂ 8277988959 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕುಂದಾಪುರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.




