ಮಂಗಳೂರು: ಆನ್‌ಲೈನ್ ವಂಚನೆಗೆ ಬರೋಬ್ಬರಿ 1 ಕೋಟಿ 60 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

ಮಂಗಳೂರು: ಆನ್‌ಲೈನ್ ವಂಚನೆಗೆ ಬಲಿಯಾದ ಹಿರಿಯ ನಾಗರಿಕರೋರ್ವರು ಬರೋಬ್ಬರಿ 1 ಕೋಟಿ 60 ಲಕ್ಷ ರೂ. ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಹಣ ಕಳೆದುಕೊಂಡಿರುವ ಹಿರಿಯ ನಾಗರಿಕರಿಗೆ ಇತ್ತೀಚೆಗೆ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ವ್ಯಕ್ತಿಯೋರ್ವ ಕರೆ ಮಾಡಿದ್ದು, “ಮುಂಬೈನಿಂದ ಥಾಯ್ಲೆಂಡ್‌ಗೆ ಕಳುಹಿಸಿದ ಪಾರ್ಸೆಲ್‌ನಲ್ಲಿ ನಿಷೇಧಿತ ವಸ್ತು ಇದೆ ಎಂಬ ಕಾರಣ ನೀಡಿ ಥಾಯ್ಲೆಂಡ್‌ನ ಕಸ್ಟಮ್ಸ್ ಅಧಿಕಾರಿಗಳು ತಡೆ ಹಿಡಿದಿದ್ದಾರೆ. ಈ ಪ್ರಕರಣವನ್ನು ಮುಂಬೈನ ಸೈಬರ್ ಕ್ರೈಮ್ ಬ್ರಾಂಚ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ನಡೆಸಿ ಸುಖಾಂತ್ಯಗೊಳಿಸಲು ನಾನು ಹೇಳಿದಷ್ಟು ಹಣ ಕೊಡಬೇಕು” ಎಂದು ಹೇಳಿದ್ದರು ಎನ್ನಲಾಗಿದೆ.
‘ಹಣ ಪಾವತಿಸದಿದ್ದರೆ ವಿದೇಶದಲ್ಲಿ ಕಲಿಯುತ್ತಿರುವ ನಿಮ್ಮ ಮಗ ಮತ್ತು ಮಗಳನ್ನು ಬಂಧಿಸುವುದಾಗಿ’ ಆತ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಂಚನೆಗೊಳಗಾದ ವ್ಯಕ್ತಿ ತಿಳಿಸಿದ್ದಾರೆ.
ಬಳಿಕ ಕರೆ ಮಾಡಿರುವ ಅಪರಿಚಿತ ವ್ಯಕ್ತಿ ನೀಡಿರುವ ವಿವಿಧ ಬ್ಯಾಂಕ್ ಖಾತೆಗೆ ವಿವಿಧ ಹಂತಗಳಲ್ಲಿ 1 ಕೋಟಿ 60 ಲಕ್ಷ ರೂಪಾಯಿ ಜಮೆ ಮಾಡಿದ್ದಾರೆ.

ಬಳಿಕ ಹಿರಿಯ ನಾಗರಿಕ ವ್ಯಕ್ತಿ ಗೆ ತಾನು ಮೋಸ ಹೋಗಿದ್ದು ಅರಿವಾಗಿದ್ದು, ಮಂಗಳೂರಿನ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Latest Indian news

Popular Stories