DavanagereFeatured Story

‘ಅಂಚೆ ಇಲಾಖೆ’ ಹುದ್ದೆಗಳಿಗೆ ಜೂನ್ 3 ರಂದು ನೇರ ಸಂದರ್ಶನ

ಭಾರತೀಯ ಅಂಚೆ ಇಲಾಖೆಯ ದಾವಣಗೆರೆ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ (PLI) ಹಾಗೂ ಗ್ರಾಮೀಣ ಅಂಚೆ ಜೀವ ವಿಮೆಯ (RPLI) ನೇರ ವಿಮಾ ಪ್ರತಿನಿಧಿಗಳು (ಏಜೆಂಟರುಗಳು) ಮತ್ತು ಫೀಲ್ಡ್ ಆಫೀಸರ್ ಗಳಾಗಿ ಕಾರ್ಯ ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ

ದಾವಣಗೆರೆ : ಭಾರತೀಯ ಅಂಚೆ ಇಲಾಖೆಯ ದಾವಣಗೆರೆ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ (PLI) ಹಾಗೂ ಗ್ರಾಮೀಣ ಅಂಚೆ ಜೀವ ವಿಮೆಯ (RPLI) ನೇರ ವಿಮಾ ಪ್ರತಿನಿಧಿಗಳು (ಏಜೆಂಟರುಗಳು) ಮತ್ತು ಫೀಲ್ಡ್ ಆಫೀಸರ್ ಗಳಾಗಿ ಕಾರ್ಯ ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಸಂಪೂರ್ಣ ವಿವರ (Resume) ಹಾಗೂ ಅಗತ್ಯ ಮೂಲ ದಾಖಲೆಗಳು ಮತ್ತು ಅವುಗಳ ನಕಲು ಪ್ರತಿಯೊಂದಿಗೆ ಜೂನ್‌ 03 ರಂದು ಬೆಳಿಗ್ಗೆ 11.00 ಗಂಟೆಗೆ ಅಂಚೆ ಅಧೀಕ್ಷಕರು, ದಾವಣಗೆರೆ ಅಂಚೆ ವಿಭಾಗ, ಗಡಿಯಾರ ಕಂಬದ ಹತ್ತಿರ, ಪ್ರಧಾನ ಅಂಚೆ ಕಛೇರಿ, ದಾವಣಗೆರೆ – 577001 ಇಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದು

ಹೆಚ್ಚಿನ ವಿವರಗಳಿಗಾಗಿ ದಾವಣಗೆರೆ ಅಂಚೆ ವಿಭಾಗದ ಅಂಚೆ ಜೀವ ವಿಮೆ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಮಹೇಶ್ ಎಸ್ (ಮೊಬೈಲ್ ಸಂಖ್ಯೆ: 9986038721) ಇವರನ್ನು ಸಂಪರ್ಕಿಸಬಹುದಾಗಿದೆ ಅಥವಾ ಇಮೇಲ್ ವಿಳಾಸ: [email protected] ಮೂಲಕ ಮಾಹಿತಿ ಪಡೆಯಬಹುದು ಎಂದು ಅಂಚೆ ಅಧೀಕ್ಷಕರು ತಿಳಿಸಿದ್ದಾರೆ

Back to top button