ಶಿಕ್ಷಣ ಕ್ಷೇತ್ರದಲ್ಲಿ ಅಭೂತಪೂರ್ವ ಸೇವೆ ಸಲ್ಲಿಸಿದ ಶಾಹೀನ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅಬ್ದುಲ್ ಹಸೀಬ್’ರಿಗೆ ಕಲ್ಯಾಣ ರತ್ನ ಪ್ರಶಸ್ತಿ

ಬಸವಕಲ್ಯಾಣದ ಮಹಾಮನೆ ಗುಣತೀರ್ಥವಾಡಿಯಲ್ಲಿ ನಡೆದ ಧರ್ಮ ಚಿಂತನ ಗೋಷ್ಠಿ ಕಾರ್ಯಕ್ರಮದಲ್ಲಿ ಭಾರತೀಯ ಸಂವಿಧಾನ ಮತ್ತು ವಚನ ಸಾಹಿತ್ಯದ ಅರಿವು ಬಗ್ಗೆ ನಡೆದ ವಿಚಾರಗೋಷ್ಠಿಯ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವವರನ್ನು ಸನ್ಮಾನಿಸಲಾಯಿತು.

ಶಿಕ್ಷಣ ಕ್ಷೇತ್ರದಲ್ಲಿ ಅಭೂತಪೂರ್ವ ಸೇವೆ ಸಲ್ಲಿಸಿ ದೇಶದಾದ್ಯಂತ ಜನಮನ್ನಣೆಗಳಿಸಿರುವ ಶಾಹೀನ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದಂತಹ ಅಬ್ದುಲ್ ಹಸೀಬ್ ರನ್ನು ಕಲ್ಯಾಣ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪೂಜ್ಯ ಶ್ರೀ ಮ.ನಿ.ಪ್ರ ಶಿವಾನಂದ ಮಹಾಸ್ವಾಮಿಗಳು ಗುರುಬಸವ ವಿರಕ್ತ ಮಠ ಹುಲಸೂರು.
ಪೂಜ್ಯ ಶ್ರೀ ಡಾ. ಗಂಗಾoಬಿಕೆ ಅಕ್ಕ. ಹರಳಯ್ಯ ಗವಿ ಬಸವಕಲ್ಯಾಣ.ಪೂಜ್ಯ ಶ್ರೀ ಪಂಚಾಕ್ಷರಿ ಸ್ವಾಮೀಜಿ ಉರಿಲಿಂಗ ಪೆದ್ದಿ ಮಠ ಬೇಲೂರು.
ಪೂಜ್ಯ ಶ್ರೀ ಶ್ರೀಕಾಂತ ಸ್ವಾಮಿಗಳು ಮಾದಾರ ಚೆನ್ನಯ್ಯ ಅರಿವಿನ ಮಠ ಬಸವಕಲ್ಯಾಣ. ಪೂಜ್ಯ ಶ್ರೀ ಚಿತ್ರಮ್ಮಾತಾಯಿ ನುಲಿಯ ಚಂದಯ್ಯ ಗವಿ ತ್ರಿಪುರಾಂತ ಬಸವಕಲ್ಯಾಣ.ಶರಣ ರೇವಣಪ್ಪ ಹೆಗಡೆ ತೋಗರಿ ಬೆಳೆ ಉದ್ದಿಮೆದಾರರು ಕಲಬುರಗಿಶರಣ ಡಾ.ಅಬ್ದುಲ್ ಖದೀರ್ ಅದ್ಯಕ್ಷರು ಶಾಹೀನ್ ಶಿಕ್ಷಣ ಸಂಸ್ಥೆ ಬೀದರ್.
ಶರಣ ಶಿವಾಜಿರಾವ್ ಮಾನೆ ನಿವೃತ್ತ ಭಾರತೀಯ ಕೆನರಾ ಬ್ಯಾಂಕ್ ಸಿ.ಸಿ ಸದಸ್ಯರು ಭಾಲ್ಕಿ
ಶರಣ ಧರ್ಮಣ್ಣ ಬಸವತತ್ವ ಚಿಂತಕರು, ಕಣಮಸ್ ಆಳಂದ ಶರಣ ಪ್ರೋ. ಶ್ರೀಶೈಲ ಮಸೂತೆ ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಬೆಂಗಳೂರು.ಶರಣ ಸಂಗಮೇಶ ತೋಗರಕೇಡೆ ಮತ್ತು ಸುಮಿತ್ರಾ ದಾವಣಗೆರೆ ಬಸವಕಲ್ಯಾಣ. ಶರಣ ಸ್ನೇಹ ಸಂತೋಷ ದೋಡ್ಡಣ್ಣನವರ ದಾಸೋಹಂ ಮೀಲೇಟ್ ಹೆಲ್ತ್ ಮಿಕ್ಸ್ ಸಂಸ್ಥಾಪಕರು, ಗೋಕಾಕ-ಬೆಳಗಾವಿ
ಬಸವ ಜ್ಯೋತಿ ಎನ್ ಹಂಗರಗಿಕರ್ ಬಸವಕಲ್ಯಾಣ.ಚನ್ನಬಸಪ್ಪ ಬಳಪೆ ದಂಪತಿಗಳು, ಗುತ್ತಿಗೆದಾರರು ಭಾಲ್ಕಿ ಮುಂತಾದವರು ಉಪಸ್ಥಿತರಿದ್ದರು.

Latest Indian news

Popular Stories